ಸಾಯಲೆಂದು ಬಂದಳು : ಕಾದು-ಕಾದು ಟ್ರ್ಯಾಕ್‌ ನಲ್ಲೇ ನಿದ್ದೆಗೆ ಜಾರಿದಳು..!

K 2 Kannada News
ಸಾಯಲೆಂದು ಬಂದಳು : ಕಾದು-ಕಾದು ಟ್ರ್ಯಾಕ್‌ ನಲ್ಲೇ ನಿದ್ದೆಗೆ ಜಾರಿದಳು..!
Oplus_131072
WhatsApp Group Join Now
Telegram Group Join Now

K2kannadanews.in

Sleep on track ವೈರಲ್ ಸುದ್ದಿ : ಸಾಮಾಜಿಕ ಜಾಲತಾಣ ಬಂದಮೇಲೆ ಚಿತ್ರ ವಿಚಿತ್ರ ಘಟನೆಗಳು ಬೆಳಕಿಗೆ ಬರುತ್ತಿವೆ. ಸಾಯಲೆಂದು ರೈಲ್ವೆ ಟ್ರ್ಯಾಕ್‌ನಲ್ಲಿ ಮಲಗಿದ್ದ ಯುವತಿಯೊಬ್ಬಳು ರೈಲಿಗಾಗಿ ಕಾದು ಕಾದು ಟ್ರ್ಯಾಕ್‌ನಲ್ಲೇ ನಿದ್ದೆಗೆ ಜಾರಿದ ವಿಚಿತ್ರ ಘಟನೆಯೊಂದು ಭಾರಿ ವೈರಲ್ ಆಗಿದೆ.

ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ರೈಲ್ವೆ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಸಾಯಲು ಬಂದಿದ್ದ ಯುವತಿಯ ಜೀವ ಉಳಿದಿದೆ. ಸಾಯಲು ನಿರ್ಧರಿಸಿದ ಯುವತಿಯೊಬ್ಬಳು ಬೆನ್ನಿಗೊಂದು ಬ್ಯಾಗ್ ಹಾಕಿಕೊಂಡು ಮೋತಿಹಾರ್ ಜಿಲ್ಲೆಯ ಛಕಿಯಾದ ರೈಲು ನಿಲ್ದಾಣಕ್ಕೆ ಬಂದಿದ್ದು, ಸಮೀಪವಿದ್ದ ರೈಲು ಹಳಿಗಳ ಮೇಲೆ ಆಕೆ ಮಲಗಿದ್ದಾಳೆ. ಆದರೆ ಎಷ್ಟು ಹೊತ್ತಾದರೂ ರೈಲು ಮಾತ್ರ ಬಂದಿಲ್ಲ, ಹೀಗಾಗಿ ರೈಲಿಗಾಗಿ ಕಾದು ಕಾದು ಸುಸ್ತಾದ ಆಕೆ ಅಲ್ಲೇ ನಿದ್ದೆಗೆ ಜಾರಿದ್ದಾಳೆ.

ನಿನ್ನೆಯಷ್ಟೇ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ X, ಸುರೇಶ ಜಾಹಾ ಎಂಬ ಖಾತೆಯಿಂದ ವೈರಲ್ ಆಗಿದೆ. ವೈರಲ್ ಆದ ವೀಡಿಯೋದಲ್ಲಿ ಕಾಣಿಸುವಂತೆ ರೈಲು ಚಾಲಕ ರೈಲಿನಿಂದ ಇಳಿದು ಬಂದ ಯುವತಿಯ ಕೈ ಹಿಡಿದು ಮೇಲೆಳಿಸುವುದನ್ನು ಕಾಣಬಹುದು. ಈ ವೇಳೆ ಯುವತಿ ನಿದ್ದೆಯಿಂದ ಎದ್ದು ಕುಳಿತುಕೊಂಡು ಅತ್ತಿತ್ತ ನೋಡುತ್ತಾಳೆ. ಕೂಡಲೇ ಅಲ್ಲಿಸೇರಿದ ಸ್ಥಳೀಯರು ಆಕೆಯನ್ನು ರೈಲ್ವೆ ಹಳಿಯಿಂದ ಮೇಲೆಳಿಸಿ ಪಕ್ಕಕ್ಕೆ ಕರೆತರುತ್ತಾರೆ. ಆದರೆ ಆಕೆ ಅವರ ಪ್ರಯತ್ನಕ್ಕೆ ವಿರೋಧ ವ್ಯಕ್ತಪಡಿಸುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

WhatsApp Group Join Now
Telegram Group Join Now
Share This Article