ದೂರದ ಊರುಗಳಿಗೆ ಪ್ರಯಾಣಿಸುವವರ ಗಮನಕ್ಕೆ : ಸೇ.12 ಸಾರಿಗೆ ಬಸ್ಸುಗಳ ಸ್ಟ್ರೈಕ್..?

K 2 Kannada News
ದೂರದ ಊರುಗಳಿಗೆ ಪ್ರಯಾಣಿಸುವವರ ಗಮನಕ್ಕೆ : ಸೇ.12 ಸಾರಿಗೆ ಬಸ್ಸುಗಳ ಸ್ಟ್ರೈಕ್..?
WhatsApp Group Join Now
Telegram Group Join Now

K2kannadanews.in

Government bus strike ರಾಯಚೂರು : ದೂರದ ಊರುಗಳಿಗೆ ಹೋಗಲು ಪ್ಲಾನ್ ಮಾಡಿಕೊಂಡಿರುವ ಪ್ರಯಾಣಿಕರೇ, ನಿಮ್ಮ ಪ್ಲಾನ್ ಬದಲಿಸಿಕೊಳ್ಳಿ ಅಥವಾ ಬೇಗ ಹೊರಡಿ. ಸೆಪ್ಟೆಂಬರ್ 12 ಸಾರಿಗೆ ಇಲಾಖೆ ಸಿಬ್ಬಂದಿಗಳು ರಾಜ್ಯಮಟ್ಟದ ಧರಣಿ ಸತ್ಯಾಗ್ರಹ ಹಮ್ಮಿಕೊಂಡ ಹಿನ್ನೆಲೆ ಬಸ್ಸುಗಳ ವ್ಯತ್ಯಾಯ ಆಗಬಹುದು.

ಹೌದು ಸೆಪ್ಟೆಂಬರ್ 12 ರಂದು ‌ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ, ವೇತನ ಹಿಂಬಾಕಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೆಎಸ್‌ಆರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವತಿಯಿಂದ ರಾಜ್ಯಮಟ್ಟದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ನೌಕರರಿಗೆ 2020ರ ಜನವರಿಯಿಂದ 38 ತಿಂಗಳ ವೇತನ ಹೆಚ್ಚಳ ಹಿಂಬಾಕಿ ಪಾವತಿಸಬೇಕಿದೆ. ಅಲ್ಲದೆ ನಿವೃತ್ತ ನೌಕರರಿಗೆ ಬಾಕಿ ಇರುವ ಹಣ ಪಾವತಿಗೆ ಸಂಬಂಧಿಸಿದಂತೆ 2024ರ ಜೂನ್ 27ರಂದು ನಿಗಮಗಳ ಆದೇಶದಂತೆ ಬಾಕಿ ಹಣ ಪಾವತಿ ಮಾಡಿಲ್ಲ.

ಈ ಎರಡು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ನಿಗಮಗಳ ಅಧಿಕಾರಿಗಳು, ಸಾರಿಗೆ ಸಚಿವರಿಗೆ ಅನೇಕ ಬಾರಿ ಮನವಿ ಮಾಡಲಾಗಿದೆ. ಆದರೆ, ಇದುವರೆಗೆ ಬಾಕಿ ಪಾವತಿಸಿಲ್ಲ.‌ ಹೀಗಾಗಿ ಹಂತ ಹಂತವಾಗಿ ರಾಜ್ಯಾದ್ಯಂತ ಕಾರ್ಮಿಕ ಸಂಘಟನೆಗಳು ಹೋರಾಟ ಕೈಗೊಂಡಿವೆ. ಮೊದಲ ಹಂತವಾಗಿ ಸೆಪ್ಟೆಂಬರ್ 12ರಂದು ಫ್ರೀಡಂ ಪಾರ್ಕ್ ನಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಸಾವಿರಾರು ನೌಕರರು ಹೋರಾಟದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಇದರಿಂದಾಗಿ ಬಸ್ ಸೇವೆಯಲ್ಲಿ ವ್ಯತ್ಯಯವಾಗುವ ಸಂಭವ ಇದೆ.

WhatsApp Group Join Now
Telegram Group Join Now
Share This Article