K2kannadanews.in
investigation ರಾಯಚೂರು : ಕಪಗಲ್ ಕ್ರಾಸ್ ಬಳಿ ಸ್ಕೂಲ್ ಬಸ್ (School bus) ಮತ್ತು ಸಾರಿಗೆ ಬಸ್ (Government bus) ಡಿಕ್ಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಮ್ಸ್ ಆಸ್ಪತ್ರೆಗೆ (RIMS Hospital) ಸಚಿವ ಎನ್.ಎಸ್. ಬೋಸರಾಜು ಭೇಟಿನೀಡಿ ಗಾಯಗೊಂಡ ಮಕ್ಕಳ ಆರೋಗ್ಯ ವಿಚಾರಿಸಿದರು.
ಹೌದು ರಾಯಚೂರು (Raichur) ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಈಗಾಗಲೇ ಅಪಘಾತದಲ್ಲಿ ಗಾಯಗೊಂಡ ಮಕ್ಕಳಿಗೆ (Children) ಚಿಕಿತ್ಸೆಯನ್ನು (Treatment) ನೀಡಲಾಗುತ್ತಿದೆ. ಆರೋಗ್ಯ ಚೇತರಿಸಿಕೊಂಡ ಮಕ್ಕಳ ಆರೋಗ್ಯ ವಿಚಾರಿಸಿ ಸಚಿವರು (minister) ಮಾಧ್ಯಮದೊಂದಿಗೆ ಮಾತನಾಡುತ್ತಾ. ಮೊದಲು ಮಕ್ಕಳ ಆರೋಗ್ಯ ಸುಧಾರಿಸಬೇಕು, ಒರ್ವ ಬಾಲಕಿ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು ಆ ಬಾಲಕಿ ಕೂಡ ಇದೀಗ ಸುಧಾರಿಸಿಕೊಂಡಿದ್ದಾಳೆ ಎಂದರು.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು (police) ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ (Action) ಜರುಗಿಸುತ್ತಾರೆ. ರಸ್ತೆ ಅಪಘಾತಕ್ಕೆ (Accident) ರಸ್ತೆ ಗುಂಡಿಗಳೇ ಕಾರಣ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ನಾನು PWD ಇಂಜಿನಿಯರ್ ಜೊತೆಗೆ ಮಾತನಾಡಿದ್ದೇನೆ. ತಕ್ಷಣವೇ ರಸ್ತೆ ಗುಂಡಿ ಮುಚ್ಚಲು ಹೇಳಿದ್ದೇನೆ. ಸದ್ಯ ಮಕ್ಕಳಿಗೆ ಪರಿಹಾರ ಹಣ ಮುಟ್ಟಿಸಿದ್ದೇವೆ. ಹೆಚ್ಚಿನ ಚಿಕಿತ್ಸೆ ಬೇಕಾದರೆ ಕೊಡಿಸಲು ಸೂಚನೆ ನೀಡಿದ್ದೇವೆ ಓರ್ವ ಬಾಲಕಿ ನಿಮಾನ್ಸ್ ಆಸ್ಪತ್ರೆಗೆ ಕರೆದೆಯಲು ಯೋಚಿಸಲಾಗುತ್ತಿದ್ದು ಆ ಬಗೆಯು ಕ್ರಮ ಕೈಗೊಳ್ಳಲು ಸೂಚಿಸಿದ್ದೇವೆ. ಇನ್ನು ಅಪಘಾತ ಕುರಿತು ತನಿಖೆ ಶುರುವಾಗಿದೆ ಎಂದ ಸಚಿವ ಎನ್.ಎಸ್. ಬೋಸರಾಜು ಹೇಳಿದರು.