K2kannadanews.in
Raichur News ರಾಯಚೂರು : ಪತ್ರತಿನಿತ್ಯ ರಾಯಚೂರು (Raichur city news) ನಗರದಲ್ಲಿ ನಡೆಯುವ ಸುದ್ದಿಗಳ ರೌಂಡ ಅಪ್ (Round Up) ನಿಮ್ಮ k2 ಎಕ್ಸ್ಪ್ರೆಸ್ ನಲ್ಲಿ ವೀಕ್ಷಿಸಿ..
ಜನಸಂಗ್ರಾಮ ಪರಿಷತ್ ರಾಜ್ಯ ಸಮಿತಿ ವತಿಯಿಂದ ಗಣಿ ಭಾದಿತ ಜನರ ಬದುಕು, ಮತ್ತು ಪರಿಸರ ಪುನಶ್ವೇತನ ಸಂಕಲ್ಪ ಸಮಾವೇಶವನ್ನು ಸೆ 04ರಂದು ಕಾರ್ಯಕ್ರಮವನ್ನು ಸಂಡೂರಿನ ಆದರ್ಶ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಘವೇಂದ್ರ ಕುಷ್ಟಗಿ ತಿಳಿಸಿದರು.
ದೇಶಾದ್ಯಂತ ವಿವಿಧ ಚೀಟ್ ಫಂಡ್ ಗಳಲ್ಲಿ 40 ಕೋಟಿ ಹೆಚ್ಚು ಜನ ಹಣ ಹೂಡಿಕೆ ಮಾಡಿದ್ದು, ಎಲ್ಲಾ ಕಂಪನಿಗಳು ಮೋಸ ಮಾಡುತ್ತಿವೆ. ಹಾಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೂಡಿಕೆ ಮಾಡಿರುವವರ ಹಣ ಹಿಂತಿರುಗಿಸಿ ಕೊಡಿಸೋವರೆಗೂ ಹೋರಾಟ ಮಾಡಲಾಗುತ್ತದೆ ಎಂದು ಟಿಪಿಜೆಪಿ ವಂಚನೆ ಸಂತ್ರಸ್ಥರ ಠೇವಣಿ ದಾರರ ಕುಟುಂಬ ವತಿಯಿಂದ ಹೋರಾಟ ಆರಂಬಿಸಲಾಗಿದೆ.
ರಾಯಚೂರು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು, ಮಕ್ಕಳಲ್ಲಿ ಕಂಡುಬರುವ ಮಾನಸಿಕ ರೋಗಗಳ ಚಿಹ್ನೆಗಳ ಕುರಿತು ಒಂದು ದಿನದ ಕಾರ್ಯಗಾರವನ್ನ ಆಯೋಜನೆ ಮಾಡಲಾಗಿತ್ತು. ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯಗಾರದಲ್ಲಿ ಭಾಗವಹಿಸಿ ಮಾಹಿತಿ ಪಡೆದರು.
ಕಳೆದ ಮೂರು ನಾಲ್ಕು ದಿನಗಳಿಂದ ಜಿಲ್ಲೆಯಾದ್ಯಂತ (District) ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ (Rain) ಸಾಕಷ್ಟು ಅನಾಹುತಗಳಾಗಿವೆ. ನಗರದ (city) ನಿಜಲಿಂಗಪ್ಪ ಬಡಾವಣೆಯಲ್ಲಿ ಬೃಹತ್ ಮರವೊಂದು (tree) ನೆಲಕ್ಕುರುಳಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತಗಳಾಗಿಲ್ಲ.