ಮಾನವೀಯತೆ ಮರೆತ ಜನ : ಮರಕ್ಕೆ ಕಟ್ಟಿ ಮಹಿಳೆಗೆ ಥಳಿತ..

K 2 Kannada News
ಮಾನವೀಯತೆ ಮರೆತ ಜನ : ಮರಕ್ಕೆ ಕಟ್ಟಿ ಮಹಿಳೆಗೆ ಥಳಿತ..
WhatsApp Group Join Now
Telegram Group Join Now

K2kannadanews.in

Humanity ರಾಜಸ್ಥಾನ : ಸಾಮಾಜಿಕ ಜಾಲತಾಣದಲ್ಲಿ ಆಘಾತಕಾರಿ ವಿಡಿಯೋ ಒಂದು ವೈರಲ್ ಆಗಿದ್ದು, ಮಾನವೀಯತೆಯನ್ನು ಪ್ರಶ್ನಿಸಿದೆ. ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಕೋಲಿನಿಂದ ಥಳಿಸಿದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಮೂಲಗಳ ಪ್ರಕಾರ ಎಕ್ಸ್ ನಲ್ಲಿ ಸಂತೋಷ ರಾಥೋರೆ ಎಂಬ ಖಾತೆಯಿಂದ ಅಪ್ ಲೋಡ್ ಆಗಿದೆ. ಈ ಘಟನೆಯು ರಾಜಸ್ಥಾನದಲ್ಲಿ ನಡೆದಿದ್ದು, ಮಹಿಳೆಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಸಂಚೋರ್ ಜಿಲ್ಲೆಯ ಪೊಲೀಸರು ಘೋಷಿಸಿದ್ದಾರೆ. ಶಂಕಿತರನ್ನು ಮಂಗಳರಾಮ್ ಮತ್ತು ಹಿರಾಮ್ ಎಂದು ಗುರುತಿಸಲಾಗಿದ್ದು, ಅವರು ಸಂತ್ರಸ್ತೆಯ ಸಂಬಂಧಿಕರು ಎಂದು ವರದಿಯಾಗಿದೆ. ಸಂತ್ರಸ್ತೆಯ ದೂರಿನ ನಂತರ, ತಕ್ಷಣವೇ ಪ್ರಕರಣ ದಾಖಲಾಗಿದ್ದು, ಮಂಗಳರಾಮ್ ಮತ್ತು ಹಿರಾಮ್ ಎಂಬುವರನ್ನು ಬಂಧಿಸಲಾಗಿದೆ ಎನ್ನಲಾಗುತ್ತಿದೆ. ಹಲ್ಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

WhatsApp Group Join Now
Telegram Group Join Now
Share This Article