K2kannadanews.in
Raichur News ರಾಯಚೂರು : ಪತ್ರತಿನಿತ್ಯ ರಾಯಚೂರು (Raichur city news) ನಗರದಲ್ಲಿ ನಡೆಯುವ ಸುದ್ದಿಗಳ ರೌಂಡ ಅಪ್ (Round Up) ನಿಮ್ಮ k2 ಎಕ್ಸ್ಪ್ರೆಸ್ ನಲ್ಲಿ ವೀಕ್ಷಿಸಿ..
ಶ್ರಾವಣ ಮಾಸದ ಅಂಗವಾಗಿ ಮಡಿವಾಳ ಸಮಾಜದ ವತಿಯಿಂದ ಮಡಿವಾಳ ಮಾಚಿದೇವ ಭವನದಲ್ಲಿ ಆಧ್ಯಾತ್ಮ ಉಪನ್ಯಾಸ ಕಾರ್ಯಕ್ರಮ ಜರುಗಿತು. ಈ ವೇಳೆ ನೂತನವಾಗಿ ಆಯ್ಕೆಯಾದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ, ಪ್ರಧಾನ ಕಾರ್ಯದರ್ಶಿ, ಖಜಾಂಚಿಗೆ ಅಧಿಕೃತವಾಗಿ ಅಧಿಕಾರ ವಹಿಸಲಾಯಿತು.
ನಗರದ ಸದರ್ ಬಜಾರ್ ಪೊಲೀಸ್ ಠಾಣೆ ಆವರಣದಲ್ಲಿ, ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಆಟೋ ಚಾಲಕರಿಗೆ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಮಾಡಲಾಯಿತು. ಈ ಒಂದು ಕಾರ್ಯಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟ ಮಾದಯ್ಯ ಅವರು ಚಾಲನೆ.
ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಜಿ.ಕುಮಾರ ನಾಯಕ್ ಅವರಿಗೆ ಎಸ್ಕೆಈ ಪ್ಯಾರಾ ಮೆಡಿಕಲ್ ಕಾಲೇಜಿನಿಂದ, ಆ.29 ರಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ.ಬಾಬುರಾವ ಶೇಗುಣಸಿ ಹೇಳಿದರು.
ರಾಯಚೂರು ಸೇರಿದಂತೆ ರಾಜ್ಯ ಐದು ಜಿಲ್ಲೆಗಳಲ್ಲಿ, ಸಾಮಾಜಿಕ ಸುರಕ್ಷಾ ಜನವೇದಿಕೆ ಮಾನವಿ ಘಟಕದಿಂದ, ಅಂಗನವಾಡಿ ಸೌಲಭ್ಯ ಮತ್ತು ಸಮಸ್ಯೆಗಳ ಕುರಿತು ಸಮೀಕ್ಷೆ ನಡೆಸಿದ್ದು ಅನೇಕ ಸಮಸ್ಯೆಗಳು ಅಂಗನವಾಡಿ ಕೇಂದ್ರಗಳು ಎದುರಿಸುತ್ತಿದ್ದು ಸರ್ಕಾರ ತ್ವರಿತವಾಗಿ ನಿವಾರಣೆಗೆ ಮುಂದಾಗಬೇಕೆಂದು ವೇದಿಕೆ ರವೀಂದ್ರ ಜಾನೇಕಲ್ ಹೇಳಿದರು.
ಹಾಕಿ ಮಾಂತ್ರಿಕ ಧ್ಯಾನಚಂದ್ರ 119 ನೇ ಹುಟ್ಟುಹಬ್ಬ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಆ.29 ಮತ್ತು 30 ರಂದು ಹಾಕಿ ರಾಯಚೂರು(ಕರ್ನಾಟಕ) ಸಂಸ್ಥೆಯಿಂದ ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಜಯಪ್ರಕಾಶರೆಡ್ಡಿ ಹೇಳಿದರು.
ರೈತ ವಿರೋಧಿ ಮೂರು ಕಾಯ್ದೆಗಳನ್ನು ರದ್ದುಗೊಳಿಸದೇ ಇರುವ ಕಾಂಗ್ರೆಸ್ ಸರ್ಕಾರ ನಡೆಯನ್ನು ಖಂಡಿಸಿ,ಕೃಷಿ ಪಂಪಸೆಟ್ ಗಳಿಗೆ ಆಧಾರ ಜೋಡಣೆ ವಿರೋಧಿಸಿ ಸೆ.4 ರಂದು ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯದಾಧ್ಯಂತ ಪ್ರತಿಭೆ ‘ಟನೆನಡೆಸಲು ನಿರ್ಧರಿಸಿದೆ ಎಂದು ರೈತ ಸಂಘದ (ಕೋಡಿಹಳ್ಳಿ ಬಣ) ಜಿಲ್ಲಾಧ್ಯಕ್ಷ ಶಿವುಪುತ್ರಗೌಡ ಹೇಳಿದರು.