K2kannadanews.in
Traffic jam ರಾಯಚೂರು : ಬೆಳಗ್ಗೆ 6ಗಂಟೆಯಿಂದ ಆರ್ ಟಿ ಪಿ ಎಸ್ (RTPS) ಬಳಿಯ ಫ್ಲೈ ಹ್ಯಾಷ್ (Flyhash) ಪೌಂಡ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು (Passenger) ಪರದಾಡುತ್ತಿದ್ದು, ಬೇಸತ್ತು ಹಿಡಿಶಾಪ ಹಾಕಿ ಬಸ್ (Bus) ಇಳಿದ ಪ್ರಯಾಣಿಕರು ನಡೆದುಕೊಂಡೆ ಹೊರಟ ಘಟನೆ ನಡೆದಿದೆ.
ಹೌದು ರಾಯಚೂರು (Raichur) ತಾಲೂಕಿನ ಶಕ್ತಿನಗರ (Shakthinagar) ಬಳಿ ಇರುವ ಆರ್‌ಟಿಪಿಎಸ್ ಮುಂಭಾಗದ ಹೆದ್ದಾರಿಯಲ್ಲಿ (Highway) ಘಟನೆ ನಡೆದಿದೆ. ಹಾರುಬೂದಿ ತುಂಬಿಕೊಳ್ಳಲು ಬಂದಿರುವ ಟ್ರಕ್ (Truck) ಮತ್ತು ಟಿಪ್ಪರ್ (Tipper) ಲಾರಿಗಳು ಅಡ್ಡಾದಿಡಿಯಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದೆ ಟ್ರಾಫಿಕ್ ಜಾಮ್ ಗೆ ಕಾರಣವಾಗಿದೆ. ಬೆಳಿಗ್ಗೆ 6 ಗಂಟೆಯಿಂದ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಮತ್ತು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಯಚೂರು ಹೈದರಾಬಾದ್ (Hyderabad) ರಸ್ತೆಯಲ್ಲಿ ಕಿಲೋಮಿಟರ್ ಗಟ್ಟದೆ ಟ್ರಾಫಿಕ್ ಜಾಮ್ ಉಂಟಾಗಿ, ವಾಹನಸವಾರರು ಬಸ್ಸುಗಳು ಮತ್ತು ಶಾಲೆಗೆ ಹೋಗುವ ವಿದ್ಯಾರ್ಥಿಗಳು ಪರದಾಡುವಂತೆ ಆಗಿದೆ. ಕೆಲ ಪ್ರಯಾಣಿಕರು ಬೇಸತ್ತು ಹಿಡಿ ಶಾಪ ಹಾಕಿ ಬ್ಯಾಗ್ ಹಿಡಿದು ನಡೆದುಕೊಂಡೆ ಮನೆ ಕಡೆ ಹೆಜ್ಜೆ ಹಾಕಿದ್ದಾರೆ.