K2kannadanews.in
Special train ರಾಯಚೂರು : ನೈರುತ್ಯ ರೈಲ್ವೆ ವತಿಯಿಂದ ಎಸ್ಎಂವಿಟಿ ಬೆಂಗಳೂರು -ಕಲಬುರಗಿ – ಎಸ್ಎಂವಿಟಿ -ಬೆಂಗಳೂರು ಎಕ್ಸ್ ಪ್ರೆಸ್ ವಿಶೇಷ ರೈಲು ಸೇವೆ ಆರಂಭಿಸಲಾಗುತ್ತಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.
ಗಣೇಶ ಚತುರ್ಥಿ ವೇಳೆ ಪ್ರಯಾಣಿಕರ ದಟ್ಟಣೆ ನಿವಾರಿಸಲು ವಿಶೇಷ ರೈಲು ಸೇವೆ ಕಲ್ಪಿಸಲಾಗಿದೆ. ಎಸ್ಎಂಇಟಿ ಬೆಂಗಳೂರು -ಕಲಬುರಗಿ ಎಕ್ಸ್ ಪ್ರೆಸ್ ವಿಶೇಷ ರೈಲು ಎಸ್ಎಂವಿಟಿ ಬೆಂಗಳೂರಿನಿಂದ ಸೆಪ್ಟಂಬರ್ 5, 6 ಮತ್ತು 7ರಂದು ರಾತ್ರಿ 9:15ಕ್ಕೆ ಹೊರಟು ಮರುದಿನ ಬೆಳಗ್ಗೆ 7:40ಕ್ಕೆ ಕಲಬುರಗಿ ತಲುಪಲಿದೆ. ಕಲಬುರಗಿಯಿಂದ ಸೆ. 7 ಮತ್ತು 8ರಂದು ಬೆಳಗ್ಗೆ 9:35ಕ್ಕೆ ಹೊರಟು ರಾತ್ರಿ 8ಗಂಟೆಗೆ ಎಸ್ಎಂವಿಟಿ ತಲುಪಲಿದೆ.
ಈ ರೈಲು 2 ಎಸಿ, 3 ಟೈರ್ ಕೋಚ್, 10 ಸ್ಲೀಪರ್ ಕ್ಲಾಸ್ ಕೋಚ್, 4 ಸೆಕೆಂಡ್ ಕ್ಲಾಸ್ ಕೋಚ್ ಮತ್ತು ಎರಡು ಲಗೇಜ್ ಬಾಕ್ಸ್ ಒಳಗೊಂಡಿರುತ್ತದೆ. ಯಲಹಂಕ, ಧರ್ಮಾವರಂ ಜಂಕ್ಷನ್, ಅನಂತಪುರ, ಗುಂತಕಲ್ ಜಂಕ್ಷನ್, ಆದೋನಿ, ಮಂತ್ರಾಲಯ ರೋಡ್, ರಾಯಚೂರು ಜಂಕ್ಷನ್, ಯಾದಗಿರಿ ಮತ್ತು ಶಹಬಾದ್ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.