ಒಂದೇ ಜಾಗದಲ್ಲಿ ಹತ್ತಾರು ಅಪಘಾತಗಳು : ನಿಜವಾಗ್ಲೂ ದೆವ್ವಾ ಇದೆಯಾ ಆ ಜಾಗದಲ್ಲಿ..

K 2 Kannada News
ಒಂದೇ ಜಾಗದಲ್ಲಿ ಹತ್ತಾರು ಅಪಘಾತಗಳು : ನಿಜವಾಗ್ಲೂ ದೆವ್ವಾ ಇದೆಯಾ ಆ ಜಾಗದಲ್ಲಿ..
WhatsApp Group Join Now
Telegram Group Join Now

K2kannadanews.in

Viral video ರಾಜಸ್ಥಾನ : ಒಂದೇ ಜಾಗದಲ್ಲಿ ಹತ್ತಾರು ಅಪಘಾತಗಳು ಜರುಗುವುದು ಬಗಳ ಕಡಿಮೆ. ಆದ್ರೆ ಇಲ್ಲೊಂದು ಸ್ಥಳವಿದೆ ಒಂದೇ ಜಾಗದಲ್ಲಿ ಹಲವಾರು ಅಪಘಾತಗಳು ಜರುಗಿದ್ದು, ಈ ಸ್ಥಳದಲ್ಲಿ ದೆವ್ವಾ ಇರಬೇಕು ಅಂತಾರೆ ನೆಟ್ಟಿಗರು.

ರಾಜಸ್ಥಾನದ ಉದಯಪುರ-ಕುರಾಬಾದ್ ಬಂಬೋರಾ ರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ನಿವಾಸಿಗಳು ಮತ್ತು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದ ಘಟನೆ ರಾಜಸ್ಥಾನದ ಭುಟಿಯಾ ಗ್ರಾಮದ ಬಳಿ ನಡೆದಿದೆ. ಕೆಲವೇ ದಿನಗಳಲ್ಲಿ ಈ ಹಲವಾರು ಅಪಘಾತಗಳು ನಡೆದಿದ್ದು, ಈ ಘಟನಾವಳಿಗಳನ್ನು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್‌ ಆದ ಮೊದಲ ಕ್ಲಿಪ್‌ನಲ್ಲಿ, ವೇಗವಾಗಿ ಬಂದ ಟ್ರಕ್‌ಗೆ ಡಿಕ್ಕಿಯಾಗಿ ಬೈಕ ಸವಾರ ಸ್ವಲ್ಪದರಲ್ಲೇ ಪಾರಾಗಿದ್ದಾನೆ. ನಂತರದ ವಿಡಿಯೋಗಳು ಬೀದಿನಾಯಿಗಳು ಮತ್ತು ಜಾನುವಾರುಗಳಿಂದ ಅಪಘಾತ ಉಂಟಾಗಿದೆ. ಇದರಿಂದಾಗಿ ಅನೇಕ ಮಂದಿಗೆ ಗಾಯಗಳಾಗಿವೆ. ಈ ಘಟನೆಗಳು ಭುಟಿಯಾ ಗ್ರಾಮದ ರಸ್ತೆಯಲ್ಲಿ ಸಂಭವಿಸಿವೆ ಎಂದು ಸಾಮಾಜಿಕ ಜಾಲತಾಣ‌ X ನ, Raghu jat ಎಂಬ ಖಾತೆಯಿಂದ ಅಪ್‌ಲೋಡ್ ಮಾಡಿದ ವೀಡಿಯೋದಲ್ಲಿ ಹೇಳಿದ್ದಾರೆ. ವೈರಲ್ ವಿಡಿಯೋ ವ್ಯಾಪಕ ಕಳವಳಕ್ಕೆ ಕಾರಣವಾಗಿದೆ. ಇದನ್ನು ನೋಡಿದ ಕೆಲ ನೆಟ್ಟಿಗರು ಅಲ್ಲಿ ದೆವ್ವ ಇದೆ ಅಂತ ಕಮೆಂಟ್ ಮಾಡಿದ್ದಾರೆ.

WhatsApp Group Join Now
Telegram Group Join Now
Share This Article