K2kannadanews.in
Rumor News ರಾಯಚೂರು : ಬಸವೇಶ್ವರ ವೃತ್ತದ (Cereal) ಬಳಿ ಇರುವ ರೈಲ್ವೆ ಮೇಲ್ (Railway bridge) ಸೇತುವೆಯಿಂದ, ವ್ಯಕ್ತಿ ಹಾರಿ ಆತ್ಮಹತ್ಯೆ (Suiced) ಮಾಡಿಕೊಂಡಿದ್ದಾನೆ ಎಂಬ ಸುದ್ದಿ, ನಗರದಲ್ಲಿ (City) ಬೆಂಕಿ ಕಿಡಿಯಂತೆ (Fire spark) ಹರಡಿದೆ. ಆದರೆ ಅಸಲಿಗೆ ಅದು ಕೇವಲ ವದಂತಿ ಸುದ್ದಿ (Rrumor) ಮಾತ್ರ ಆಗಿದ್ದೆ ಬೇರೆ.
ಹೌದು ರಾಯಚೂರು (Raichur) ನಗರದ ಬಸವೇಶ್ವರ (Basaweshwar) ವೃತ್ತದಿಂದ ಡಿಸಿ ನಿವಾಸಕ್ಕೆ (DC house) ಹೋಗುವ ದಾರಿಯಲ್ಲಿರುವ ರೈಲು ಮೇಲು ಸೇತುವೆ ಬಳಿ ಜನ ಸೇರಿದ್ದರು. ಕಾರಣ ಆ ಗುಂಪಿನಲ್ಲಿದ್ದ ಯಾರೋ ಒಬ್ಬ ವ್ಯಕ್ತಿ ಒಂದು ವದಂತಿ ಸುದ್ದಿಯನ್ನು ಹರಿಬಿಟ್ಟಿದ್ದ. ವ್ಯಕ್ತಿಯೊಬ್ಬ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುದ್ದಿ. ಈ ಒಂದು ಸುದ್ದಿ ಬಾಯಿಂದ ಬಾಯಿಗೆ ಹರಡಿ ದೊಡ್ಡದಾಗಿತ್ತು.
ಇದರಿಂದ ಗಾಬರಿಗೊಂಡ ಪೊಲೀಸರು (Police) ಕೂಡ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಅಸಲಿ ಸತ್ಯ (Truth) ಬಯಲಿಗೆ ಬಂದಿದೆ. ಅವಂದು ರೈಲ್ವೆ ಟ್ರ್ಯಾಕ್ ಮೇಲೆ ಯಾವುದೇ ವ್ಯಕ್ತಿ ಬಿದ್ದಿರಲಿಲ್ಲ ಆತ್ಮಹತ್ಯೆಯು ಮಾಡಿಕೊಳ್ಳಲಿಲ್ಲ. ರೈಲೊಂದು ವೇಗವಾಗಿ ಹೋಗುತ್ತಿದ್ದ ವೇಳೆ ಎಮ್ಮೆ ಅಡ್ಡ ಬಂದ ಕಾರಣ ಎಮ್ಮೆಗೆ ಡಿಕ್ಕಿ ಹೊಡೆದ ಕಾರಣ ಎಮ್ಮೆ ಮೃತಪಟ್ಟಿತ್ತು. ಅದನ್ನ ಗಮನಿಸದ ಕೆಲವರು ಹರಡಿದ ಸುದ್ದಿ, ಬಾಯಿಂದ ಬಾಯಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ವದಂತಿ ಹರಡಿತ್ತು.