353 ಆರಾಧನೆ : ಸಪ್ತರಾತ್ರೋತ್ಸವಕ್ಕೆ ಚಾಲನೆ ನೀಡಿದ ಸುಭುದೇಂದ್ರ ತೀರ್ಥರು

K 2 Kannada News
353 ಆರಾಧನೆ : ಸಪ್ತರಾತ್ರೋತ್ಸವಕ್ಕೆ ಚಾಲನೆ ನೀಡಿದ ಸುಭುದೇಂದ್ರ ತೀರ್ಥರು
WhatsApp Group Join Now
Telegram Group Join Now

K2kannadanews.in

Rayara aradhane ಮಂತ್ರಾಲಯ : ಶ್ರೀ ರಾಘವೇಂದ್ರ ಸ್ವಾಮಿಗಳ (Ragavendra swamy) ಮಠದಲ್ಲಿ 353 ನೇ ಆರಾಧನಾ ಮಹೋತ್ಸವ (Aradhan mahothsava) ಆಂಭವಾಗಿದೆ. 24ನೇ ತಾರೀಖಿನವರೆಗೂ ಶ್ರೀಮಠದಲ್ಲಿ ಸಪ್ತರಾತ್ರೋತ್ಸವ (Sptharathrotsava) ಹಮ್ಮಿಕೊಳ್ಳಲಾಗಿದ್ದು, ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರಿಂದ ರಾಯರ ಆರಾಧನಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ.. ಭಜತಾಮ್ ಕಲ್ಪವೃಕ್ಷಾಯ‌ ನಮತಾಮ್ ಕಾಮಧೇನವೇ. ಕಲಿಯುಗ ಕಾಮಧೇನು ಎಂದೇ ಜಗತ್ಪ್ರಸಿದ್ಧಿ ಪಡೆದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅದ್ಧೂರಿ 353 ನೇ ರಾಯರ ಆರಾಧನಾ ಕಾರ್ಯಕ್ರಮ ನಡೆಯುತ್ತಿದೆ. ಇಂದಿನಿಂದ 24 ನೇ ತಾರೀಖಿನಿವರೆಗೂ ಏಳು ದಿನಗಳ ಕಾಲ ಸಪ್ತರಾತ್ರೋತ್ಸವ ಹಿನ್ನೆಲೆ ಶ್ರೀಮಠದಿಂದ ವಿಶೇಷ ಪೂಜೆ ಕೈಂಕರ್ಯ ನಡೆಯುತ್ತವೆ.

ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರಿಂದ ರಾಯರ ಮೂಲ‌ ಬೃಂದಾವನ ವಿಶೇಷ ಪೂಜೆ, ಮೂಲ ರಾಮದೇವರ ಪೂಜೆ ನಡೆದ ಬಳಿಕ ಶ್ರೀಮಠದ ಮುಂಭಾಗದಲ್ಲಿ ಗೋವು, ಅಶ್ವ ಪೂಜೆ ಹಾಗೂ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಭಕ್ತರಿಗೆ ಆಶೀರ್ವಚನ‌ ನೀಡಿದರು.

WhatsApp Group Join Now
Telegram Group Join Now
Share This Article