K2kannadanews.in
Boy death in rever ಮಾನ್ವಿ : ತುಂಗಭದ್ರಾ (Tungabhadra rever) ನದಿಯಲ್ಲಿ ಈಜಲು ಹೋದ (Drowned in water) ಬಾಲಕ ರೈತರು (Farmers) ಹಾಕಿದ್ದ ಪಂಪ್ಸೆಟ್ಟು (Pump set) ವೈರಿಗೆ ಸಿಕಿ ಹಾಕಿಕೊಂಡು ಮೇಲೆ ಬರಲು ಆಗದೆ ಮೃತಪಟ್ಟ ಘಟನೆ ಚೀಕಲಪರ್ವಿ ಗ್ರಾಮದಲ್ಲಿ ನಡೆದಿದೆ.
ರಾಯಚೂರು (Raichur) ಜಿಲ್ಲೆಯ ಮಾನ್ವಿ (manvi) ತಾಲೂಕಿನ ಚೀಕಲಪರ್ವಿ ಗ್ರಾಮದಲ್ಲಿ ಘಟನೆ ನಡೆದಿದ್ದು. ವಿರೇಶ್ (13) ಮೃತ ದುರ್ದೈವಿ ಎಂದು ಹೇಳಲಾಗುತ್ತಿದೆ. ವಿರೇಶ್ ಜಾತ್ರೆ ನಿಮಿತ್ತ ಚೀಕಲಪರ್ವಿ ಗ್ರಾಮಕ್ಕೆ ಬಂದಿದ್ದ. ಈ ವೇಳೆ ತನ್ನಿಬ್ಬರೂ ಸ್ನೇಹಿತರೊಂದಿಗೆ (Brothers) ನದಿಗೆ ಈಜಲು (Swimming) ತೆರಳಿದ್ದ ಎನ್ನಲಾಗುತ್ತಿದೆ.
ನದಿಗೆ ಇಳಿದ ಬಾಲಕನ ಸಾವು ಅಲ್ಲೆ ಕಾದಿತ್ತು ಎಂಬ ವಿಷಯ ಬಾಲಕನಿಗೆ ತಿಳಿದಿರಲಿಲ್ಲ. ಈಜಲು ನದಿಗೆ ಇಳಿದಾಗ ಪಂಪಸೆಟ್ ಕೇಬಲ್ ವಿರೇಶ್ನ ಕಾಲಿಗೆ ಸುತ್ತಿಕೊಂಡ ಕಾರಣ, ಈಜಲು ಆಗದೆ ಹೊರಬಾರಲು ಆಗದೆ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಸ್ಥಳೀಯರ ಸಹಾಯದಿಂದ ಮೃತದೇಹ ಹೊರತೆಗೆಯಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮಾನ್ವಿ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.