K2kannadanews.in
Crime News ಮುಂಬೈ : ವ್ಯಕ್ತಿಯೊಬ್ಬನನ್ನು ಕೊಲೆ (Murder) ಮಾಡಿ ಯಾರಿಗೂ ಅನುಮಾನ (Doubt) ಬಾರದಂತೆ ಮೃತದೇಹವನ್ನು ಸೂಟ್ ಕೇಸ್ (suitcase) ನಲ್ಲಿ ತುಂಬಿಸಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು (Accused) ಪೊಲೀಸರು ಬಂಧಿಸಿದ ಘಟನೆ ಮುಂಬೈನಲ್ಲಿ (Mumbai) ನಡೆದಿದೆ.
ಹೌದು ವ್ಯಕ್ತಿಯನ್ನು ಹತ್ಯೆಗೈದ ನಂತರ ರೈಲಿನಲ್ಲಿ (Train) ಶವವನ್ನು ಸೂಟ್‌ಕೇಸ್‌ನಲ್ಲಿ ಸಾಗಿಸುವಾಗ ಶಂಕಿತರು ಸಿಕ್ಕಿಬಿದ್ದಿದ್ದಾರೆ (Arrested). ದಾದರ್ ರೈಲು ನಿಲ್ದಾಣದಲ್ಲಿ (Dadar railway station) ಬ್ಯಾಗ್‌ನಲ್ಲಿ ಮೃತದೇಹ ಪತ್ತೆಯಾದ ನಂತರ ಮುಂಬೈ ಪೊಲೀಸರು (Police) ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಜೈ ಪ್ರವೀಣ್ ಚಾವ್ಡಾ ಮತ್ತು ಶಿವಜೀತ್ ಸುರೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಹತ್ಯೆಗೀಡಾದವರನ್ನು ಸಾಂತಾಕ್ರೂಜ್ ನಿವಾಸಿ ಅರ್ಷದ್ ಅಲಿ ಶೇಖ್ ಎಂದು ಗುರುತಿಸಲಾಗಿದೆ. ಹಂತಕರು ಮತ್ತು ಕೊಲೆಯಾದ ವ್ಯಕ್ತಿಯ ನಡುವೆ ಮಹಿಳೆಯ (Women) ವಿಷಯಕ್ಕೆ ಜಗಳವಾಗಿತ್ತು. ಆ ಜಗಳ ಕೊಲೆಯಲ್ಲಿ ಅಂತ್ಯವಾಗಿತ್ತು.
ಜಗಳದ ನಡುವೆ ಕೊಲೆ ಮಾಡಿದ ನಂತರ ಆತಂಕಕ್ಕೀಡಾದ ಹಂತಕರು ಶವವನ್ನು ಸಂಪೂರ್ಣವಾಗಿ ಪ್ಲಾಸ್ಟಿಕ್‌ನಲ್ಲಿ ಸುತ್ತಿ ಸೂಟ್‌ಕೇಸ್‌ನಲ್ಲಿ ತುಂಬಿಕೊಂಡಿದ್ದರು. ನಂತರ ಏನೂ ಗೊತ್ತಿಲ್ಲದಂತೆ ರೈಲಿನಲ್ಲಿ ಪ್ರಯಾಣಿಸಿದ್ದರು. ಪೊಲೀಸ್ ತನಿಖೆಯ ಪ್ರಕಾರ ಸಾಂತಾಕ್ರೂಜ್ ನಿವಾಸಿ ಅರ್ಷದ್ ಅಲಿ ಶೇಖ್ ಕೊಲೆಗೆ ಮಹಿಳೆಯ ಬಗೆಗಿನ ಜಗಳ ಕಾರಣವಾಯಿತು. ಜೈ ಪ್ರವೀಣ್ ಚಾವ್ಡಾ ಮತ್ತು ಶಿವಜೀತ್ ಸುರೇಂದ್ರ ಸಿಂಗ್ ಎಂಬ ಇಬ್ಬರು ಶಂಕಿತ ಆರೋಪಿಗಳು ಈ ಅಪರಾಧದಲ್ಲಿ ಭಾಗಿಯಾಗಿದ್ದಾರೆ.