K2kannadanews.in
Roads like lakes ರಾಯಚೂರು : ನಗರದಲ್ಲಿ ರಾತ್ರಿ ಒಂದು ಗಂಟೆಗಳ ಕಾಲ ಸುರಿದ ಬಾರಿ ಮಳೆಯಿಂದಾಗಿ, ನಗರದ ಮುಖ್ಯ ರಸ್ತೆಗಳು ಕೆರೆಯಂತಾಗಿ ವಾಹನ ಸವಾರರು ಸಂಚರಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ರಾಯಚೂರು ನಗರದಲ್ಲಿ ಕಳೆದ ರಾತ್ರಿ ಒಂದು ಗಂಟೆಗಳ ಕಾಲ ಭಾರಿ ಮಳೆ ಸುರಿಯಿತು, ಒಂದು ವಾರದಿಂದ ಬಿಸಿಲಿಗೆ ಕಂಗಟ್ಟಿದ್ದ ನಗರ ವಾಸಿಗಳಿಗೆ ತಂಪೆರದ ಮಳೆರಾಯ. ಆದರೆ ಇದೇ ಸಮಯದಲ್ಲಿ ನಗರದ ವಿವಿಧ ಮುಖ್ಯ ರಸ್ತೆಗಳು ಕೆರೆಯಂತಾಗಿ ವಾಹನ ಸವಾರರು ಸಂಚರಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅವೈಜ್ಞಾನಿಕ ರಸ್ತೆ ನಿರ್ಮಾಣವೋ ಅಥವಾ ನಗರಸಭೆ ಅಧಿಕಾರಿಗಳ ನಿರ್ಲಕ್ಷವೋ ಗೊತ್ತಿಲ್ಲ, ಸಾರ್ವಜನಿಕರು ಮಾತ್ರ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ನಗರದ ಮಂತ್ರಾಲಯಂ ರಸ್ತೆಯಲ್ಲಿ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿ, ರಸ್ತೆಯ 2 ಬದಿಯಲ್ಲಿ ಡಿವೈಡರ್ ಮಟ್ಟಕ್ಕೆ ನಿಂತಿದ್ದವು. ಕೆರೆಯಂತೆ ಕಾಣ್ತಿರೋ ನೀರಲ್ಲೇ ಬೈಕ್ ಸವಾರರ ಹರಸಾಹಸದಿಂದ ರಸ್ತೆ ಮಧ್ಯೆ ಕೆಟ್ಟು ನಿಂತ ಕೆಲ ದ್ವಿಚಕ್ರ ವಾಹನಗಳ, ಸೈಲೆನ್ಸರ್ ಒಳಗೆ ನೀರು ಹೊಕ್ಕು ಕೆಟ್ಟು ನಿಂತ ಘಟನೆಯು ನಡೆದವು. ಸರಿಯಾಗಿ ಚರಂಡಿ ವ್ಯವಸ್ಥೆ ಇಲ್ಲದಿರೋಂದರಿಂದ ಅವಾಂತರ ಆಗಿದೆ ಎಂದು ನಗರಸಭೆ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕಿ ಮುಂದೆ ಸಾಗಿದರು.