K2kannadanews.in
PSI Parashuram ರಾಯಚೂರು : ಯಾದಗಿರಿಯಲ್ಲಿ (Yadgiri) ಇರುವಂತಹ ಪೊಲೀಸ್ (Police) ಅಧಿಕಾರಿಗಳು ಎಂಎಲ್ಎ (MLA) ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಅಂದರೆ ಅವರಿಗೆ ಲಂಚ (bribe) ಕೊಡಲೇಬೇಕಂತೆ, ಹೀಗೊಂದು ಗಂಭೀರ ಆರೋಪ ಮೃತ ಪಿಎಸ್ಐ ಪರಶುರಾಮ್ ಅವರ ಪತ್ನಿ (wife) ಮಾಡಿದ್ದಾರೆ.
ಯಾದಗಿರಿ ನಗರ ಠಾಣೆಯ ಪಿಎಸ್ಐ ಪರಶುರಾಮ್ (PSI parsuram) ಅವರ ಸಾವಿಗೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ಶಾಸಕರ ನಡವಳಿಕೆ ಬಗ್ಗೆ ಸಾಕಷ್ಟು ಅನುಮಾನಗಳು (doubt) ಆರೋಪಗಳು ಕೇಳಿ ಬರುತ್ತಿದ್ದು. ಸ್ವತಃ ಮೃತ ಪರಶುರಾಮ್ ಪತ್ನಿ ಶ್ವೇತ (Shwtha) ಅವರು ಕೂಡ ಗಂಭೀರವಾಗಿ ಆರೋಪಿಸಿದ್ದಾರೆ. ವರ್ಗಾವಣೆ (transfer) ನಂತರ ಒಂದು ಸ್ಥಾನದಿಂದ ಮತ್ತೊಂದು ಸ್ಥಾನಕ್ಕೆ ಹೋಗಬೇಕಾದರೆ ಶಾಸಕರುಗಳಿಗೆ ಲಂಚ ಕೊಡಲೇಬೇಕು, ಲಂಚ ಕೊಟ್ಟ ನಂತರವೇ ಅವರಿಗೆ ಪೋಸ್ಟಿಂಗ್ (Posting) ಕೊಡಲಾಗುತ್ತದೆ. ಲಂಚ ಕೊಟ್ಟ ನಂತರವಷ್ಟೇ ಶಾಸಕರ ಪತ್ರವು (MLA latter) ನೀಡಲಾಗುತ್ತದೆ ಯಾದಗಿರಿಯಲ್ಲಿರುವ ಪ್ರತಿಯೊಬ್ಬ ಪೊಲೀಸ್ ಅಧಿಕಾರಿಗಳು ಕೂಡ ಲಂಚ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.