K2kannadanews.in
NEKETC Bus accident ಮಾನ್ವಿ : ಹಳ್ಳದ ಸೇತುವೆಯ (Bridge) ತಡೆಗೋಡೆಗೆ ಈಶಾನ್ಯ ಸಾರಿಗೆ ಬಸ್ ಡಿಕ್ಕಿ (collision) ಹೊಡೆದು ಹಳ್ಳಕ್ಕೆ ಬಿದ್ದ ಘಟನೆ ಜರುಗಿದ್ದು, 20 ಕ್ಕೂ ಹೆಚ್ಚು ಜನರಿಗೆ (passenger) ಗಾಯವಾಗಿ, ಮೂವರ ಸ್ಥಿತಿ ಗಂಭೀರವಾಗಿದೆ.
ರಾಯಚೂರು (Raichur) ಜಿಲ್ಲೆಯ ಮಾನ್ವಿ (manvi) ತಾಲೂಕಿನ ನಂದಿಹಾಳ ಗ್ರಾಮದ ಬಳಿ ಘಟನೆ ಜರುಗಿದ್ದು, KA36 F1366 ಬಸ್ಸಿನ ಸ್ಟೇರಿಂಗ್ (String) ರಾಡ್ ತುಂಡಾಗಿ ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದು ಚಾಲಕನ (driver) ನಿಯಂತ್ರಣ ತಪ್ಪಿ (out of control) ಹಳ್ಳಕ್ಕೆ ಇಳಿದಿದೆ. ಬಸ್ಸಿಲ್ಲಿ ಸುಮಾರು 50ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದರು, ಮಾನ್ವಿಯಿಂದ ಹೊರಟಿದ್ದ ಬಸ್ಸಿನಲ್ಲಿ ಕೇವಲ 30 ಟಿಕೆಟ್ ವಿತರಿಸಲಾಗಿತ್ತು ಇನ್ನು ಕೆಲವರಿಗೆ ಟಿಕೆಟ್ (Tickets) ವಿತರಿಸಬೇಕಾಗಿತ್ತು ಅಷ್ಟರಲ್ಲಿ ಘಟನೆ ಜರುಗಿದೆ.
ಮಾನ್ವಿ ಯಿಂದ ಸಿಂಧನೂರು (Manvi to Sindhanur) ಕಡೆಗೆ ಹೊರಟಿದ್ದ ಸಾರಿಗೆ ಬಸ್ ಅಪಘಾತಕ್ಕೆ ಒಳಗಾದ ಹಿನ್ನೆಲೆ ಚಾಲಕನಿಗೂ ಗಂಭೀರ ಗಾಯವಾಗಿದೆ (Injured) ಎಂದು ವರದಿಯಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು (police) ಸಾರ್ವಜನಿಕರ ಸಹಾಯದಿಂದ ಗಾಯಾಳುಗಳನ್ನು ಮಾನ್ವಿ ತಾಲ್ಲೂಕು ಆಸ್ಪತ್ರೆಗೆ (Hospital) ರವಾನಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡಿರುವ ಗಾಯಾಳುಗಳನ್ನ ರಾಯಚೂರು ಆಸ್ಪತ್ರೆಗೆ ಕಳುಹಿಸಲಾಗಿದೆ. ಘಟನೆಯು ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.