K2kannadanews.in
Trading company Ford ರಾಯಚೂರು : ಬಹು ಕೋಟಿ ವಂಚನೆ ಆರೋಪ ಹೊತ್ತಿರುವ ದರ್ವೇಶ್ ಕಂಪನಿ ವಿರುದ್ಧ ತನಿಖೆ ನಡೆಯುತ್ತಿದೆ. ಅಧಿಕಾರಿಗಳು (officer) ಈಗಾಗಲೇ ಮೂವರನ್ನು ವಶಕ್ಕೆ (custody) ಪಡೆದಿದ್ದು, ಇಬ್ಬರ ಮನೆ (house) ಮೇಲೆ ದಾಳಿ (attack) ನಡೆಸಿ ಶೋಧ ಕಾರ್ಯ ನಡೆಸಿದ್ದು ಅಪಾರ ಪ್ರಮಾಣದ ಹಣ (money)ಪತ್ತೆಯಾಗಿದೆ ಎನ್ನಲಾಗುತ್ತಿದೆ.
ಧರವೇಶ ಗ್ರೂಫ್ ವಂಚನೆ ಕುರಿತಂತೆ ತನಿಖೆ ಮುಂದುವರೆಸಿರುವ ಸಿಐಡಿ (CID team) ತಂಡ, ವಾಸೀಮ್ ಮತ್ತು ಬಬ್ಲೂ ಎಂಬ ಆರೋಪಿಗಳ ಮನೆ ಮೇಲೆ ಧಾಳಿನಡೆಸಿ, ಅಪಾರ ಪ್ರಮಾಣ ನಗದು ಹಣ (hard cash) ಹಾಗೂ ಚಿನ್ನಾಭರಣ ವಶ ಪಡೆಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಮನೆಗಳ ಮೇಲೆ ಧಾಳಿ ನಡೆಸಿ ಮಹತ್ವದ ದಾಖಲೆ ( important documents), ಬ್ಯಾಂಕ್ ಖಾತೆ (bank account) ಸೇರಿ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಲಕ್ಷಾಂತರರ ಮೌಲ್ಯದ ನಗದು ಹಣ ಹೊಂದಿದ್ದ ಬ್ಯಾಗ್ ಪತ್ತೆಯಾಗಿದೆ. ಹಣ ಮೂಲವೇನು ತಿಳಿದುಬಂದಿಲ್ಲ. ಹೂಡಿಕೆದಾರರಿಂದ ಕೋಟ್ಯಾಂತರ ಹಣ ಸಂಗ್ರಹಿಸಿರುವ ಮೂರು ಜನ ಅರೋಪಿಗಳು ಅಪರಾಧ ವಿಭಾಗದ ಪೊಲೀಸರ ವಶದಲ್ಲಿದ್ದಾರೆ.
ಪ್ರಕರಣದ ತನಿಖೆ (investigation) ಮುಂದುವರೆದಿದ್ದು ಅಪಾರ ಪ್ರಮಾಣ ನಗದು ಹಣ ಪತ್ತೆಯಾಗುರುವುದು ಮಹತ್ವ ಪಡೆದಂತಾಗಿದೆ. ಧಾಳಿ ಸಂದರ್ಬದಲ್ಲಿ ದೊರೆತಿರುವ ಖಚಿತ ಮಾಹಿತಿ ಲಭ್ಯವಾಗಿಲ್ಲ. ಸಿಐಡಿ ಎಸ್ಪಿ ಪುರುಷೋತ್ತಮ ನೇತೃತ್ವದಲ್ಲಿ ತಂಡ ತನಿಖೆ ಮುಂದುವರೆಸಿದೆ. ವಂಚನೆಗೆ ಒಳಗಾದ ಜನರು ಹೆಚ್ಚಿನ ಮಾಹಿತಿ, ದೂರು ನೀಡುವಂತೆ ಮನವಿ ಮಾಡಿದ್ದಾರೆ.