K2 ಎಕ್ಸ್‌ಪ್ರೆಸ್‌ ನ್ಯೂಸ್ ನಲ್ಲಿ ‌ವೀಕ್ಷಿಸಿ ಇಡೀ ದಿನದ ರಾಯಚೂರು ಸುದ್ದಿಗಳ ರೌಂಡಪ್..

K 2 Kannada News
K2 ಎಕ್ಸ್‌ಪ್ರೆಸ್‌ ನ್ಯೂಸ್ ನಲ್ಲಿ ‌ವೀಕ್ಷಿಸಿ ಇಡೀ ದಿನದ ರಾಯಚೂರು ಸುದ್ದಿಗಳ ರೌಂಡಪ್..
WhatsApp Group Join Now
Telegram Group Join Now

K2kannadanews.in

Raichur News ರಾಯಚೂರು : ಪತ್ರತಿನಿತ್ಯ ರಾಯಚೂರು (Raichur city news) ನಗರದಲ್ಲಿ ನಡೆಯುವ ಸುದ್ದಿಗಳ ರೌಂಡ ಅಪ್ ನಿಮ್ಮ k2 ಎಕ್ಸ್‌ಪ್ರೆಸ್‌ ನಲ್ಲಿ ವೀಕ್ಷಿಸಿ.

ಕರ್ನಾಟಕ ಕಾರ್ಯ ನಿರ್ವಹಿತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾಮಟ್ಟದ ಪತ್ರಿಕಾ ದಿನಾಚರಣೆಯನ್ನು ಜುಲೈ 28 ರಾಯಚೂರು ನಗರದ ಡಾ.ಬಾಬು ನವಜೀವನ ರಾಮ್ ಸಮುದಾಯ ಭವನದಲ್ಲಿ ಮಾಡಲಾಗಿದೆ. ಈ ಒಂದು ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ಜಿಲ್ಲಾಧ್ಯಕ್ಷ ಆರ್ ಗುರುನಾಥ್ ಹೇಳಿದರು.

ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಯಾವುದೇ ಬಡವರಿಗೆ ಉಪಯೋಗವಾಗುವ ಯೋಜನೆಗಳು ಇಲ್ಲ. 41.21 ಕೋಟಿ ಬಜೆಟ್ ಮಂಡನೆ ಮಾಡಿದ್ದು, ಮತ್ತಷ್ಟು ಸಾಲಗಾರರನ್ನಾಗಿ ಮಾಡುತ್ತದೆ. ನಿರುದ್ಯೋಗ, ಬಡತನ, ಆರ್ಥಿಕ ಸಮಸ್ಯೆಗಳು ಸಾಕಷ್ಟು ಇವೆ. ಇದೊಂದು ಬಡವರ ವಿರೋಧಿ ಬಜೆಟ್ ಆಗಿದೆ ಎಂದು ಸಿಪಿಐಎಂ ರಾಜ ಕಾರ್ಯದರ್ಶಿ ಬಸವರಾಜ ಅಸಮಾಧಾನ ಹಾಕಿದರು.

ರಾಯಚೂರು ನಗರಸಭೆಯಲ್ಲಿ ಇಂದು ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರಿಂದ, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಸದಸ್ಯರ ಸಮ್ಮುಖದಲ್ಲಿ ಸಭೆ ಮಾಡಲಾಯಿತು. ಈ ವೇಳೆ ನಗರಸಭೆ ಹಣಕಾಸು ವಿಚಾರವಾಗಿ ಮಾಡುತ್ತಿರುವ, ಖರ್ಚು ವೆಚ್ಚ ಬಗ್ಗೆ ಸಾಕಷ್ಟು ಚರ್ಚೆ ಮಾಡಲಾಯಿತು. ಈ ವೇಳೆ ಕೆಲಸ ಸದಸ್ಯರು ನಗರಸಭೆ ಆಡಳಿತದ ಬಗ್ಗೆ ಅಸಮಾಧಾನ ಹೊರಹಾಕಿದರು.

ಬಿಜೆಪಿ ನೇತೃತ್ವದ ಎನ್ ಡಿ ಎ ಸರಕಾರ ಮಂಡಿಸಿರುವ ಬಜೆಟ್ ನಲ್ಲಿ, ಬಡವರ ವಿರೋಧಿ ಯೋಜನೆಗಳು ಹೆಚ್ಚಿದೆ. ಬಡವರಿಗೆ ಅನುಕೂಲವಾಗುವುದಿಲ್ಲ ಎಂದು ಹೇಳಿ ಅಸಮಾಧಾನ ವ್ಯಕ್ತಪಡಿಸಿ, ಜಿಲ್ಲಾಧಿಕಾರಿಗಳ ಕಚೇರಿ ಮುಂದೆ, ವಿವಿಧ ಸಂಘಟನೆಗಳು ಪ್ರತಿಭಟನೆ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.

ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ, ಇಂದು ಜಿಲ್ಲಾ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಸೇರಿ, ಕೇಂದ್ರ ಸರ್ಕಾರದ ಬಜೆಟ್ ವಿರುದ್ಧ ಅಸಮಾಧಾನ ಹೊರಹಾಕಿ ಪ್ರತಿಭಟನೆ ಮಾಡಿದರು‌. ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ, ಮಲತಾಯಿ ಧೋರಣೆ ತೋರಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

WhatsApp Group Join Now
Telegram Group Join Now
Share This Article