K2kannadanews.in
Trading company ರಾಯಚೂರು : ನಾನು ಹೂಡಿಕೆ (Invest) ಮಾಡಿರುವ ದುಡ್ಡು (Money) ಕೊಡದಿದ್ದರೆ ಕೃಷ್ಣಾ ನದಿಗೆ (Krishna river) ಹಾರುತ್ತೇನೆ, ನನ್ನ ಸಾವಿಗೆ (Death) ಇವರೇ ಕಾರಣ ಎಂದು ಟ್ರೇಡಿಂಗ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ ವ್ಯಕ್ತಿಯೊಬ್ಬರು, ತುಂಬಿ ಹರಿಯುತ್ತಿರುವ ಕೃಷ್ಣಾ ನದಿ (Krishna river) ಸೇತುವೆ ಮೇಲೆ ನಿಂತು ಅಳಲು ತೋಡಿಕೊಂಡಿರುವ ವಿಡಿಯೋ ಸಾಮಾಜಿಕ (Social media) ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು ರಾಯಚೂರು (Raichur) ನಗರದಲ್ಲಿ ನೂರಾರು ಜನ (Many people) ಟ್ರೇಡಿಂಗ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದರು. ಇದೀಗ ಒಂದು ಕಂಪನಿ (Company) ಮುಂಭಾಗದಲ್ಲಿ ನಿಂತು ತಮ್ಮ ಹೂಡಿಕೆ ಮಾಡಿದ ಹಣ ವಾಪಸ್ (Return) ನೀಡುವಂತೆ ಕೇಳುತ್ತಿದ್ದಾರೆ. ಈ ಮಧ್ಯ ಓರ್ವ ವ್ಯಕ್ತಿ, ತುಂಬಿ ಹರಿಯುತ್ತಿರುವ ಕೃಷ್ಣಾ ನದಿ ಸೇತುವೆ ಮೇಲೆ ನಿಂತು ಅಳಲು ತೋಡಿಕೊಂಡಿದ್ದಾನೆ.
ನಾನು ಒಂದು ಮಾತು ಹೇಳುತ್ತೇನೆ, ನಾನು ಶೇರ್ ಮಾರ್ಕೆಟ್ ನಲ್ಲಿ ದುಡ್ಡು ಹಾಕಿದ್ದೇನೆ, ಒಂದು ವೇಳೆ ಸೋಮವಾರದ ಒಳಗೆ ದುಡ್ಡು ಬಾರದಿದ್ದರೆ. ಕೃಷ್ಣಾ ನದಿಗೆ ಹಾರುತ್ತೇನೆ, ನನ್ನ ಸಾವಿಗೆ ಇವರೇ ಕಾರಣರಾಗುತ್ತಾರೆ ಎಂದು, ಸುಜಾ, ಲಂಗಡಾ ಫಾರೂಕ್, ಮಸ್ಕಿನ್ ಇಷ್ಟು ಜನ ದುಡ್ಡು ಕೊಡಬೇಕು ಎಂದು ಹೇಳಿದ್ದು, ಒಂದು ವೇಳೆ ನಾನು ಸತ್ತರೆ ನನ್ನ ಸಾವಿಗೆ ಇವರೇ ಜವಾಬ್ದಾರಿ ಎಂದು ಟ್ರೇಡಿಂಗ್ ಕಂಪನಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.