K2 ಎಕ್ಸ್‌ಪ್ರೆಸ್‌ ನ್ಯೂಸ್ ನಲ್ಲಿ ‌ವೀಕ್ಷಿಸಿ ಇಡೀ ದಿನದ ರಾಯಚೂರು ಸುದ್ದಿಗಳ ರೌಂಡಪ್..

K 2 Kannada News
K2 ಎಕ್ಸ್‌ಪ್ರೆಸ್‌ ನ್ಯೂಸ್ ನಲ್ಲಿ ‌ವೀಕ್ಷಿಸಿ ಇಡೀ ದಿನದ ರಾಯಚೂರು ಸುದ್ದಿಗಳ ರೌಂಡಪ್..
WhatsApp Group Join Now
Telegram Group Join Now

K2kannadanews.in

Raichur News ರಾಯಚೂರು : ಪತ್ರತಿನಿತ್ಯ ರಾಯಚೂರು (Raichur city news) ನಗರದಲ್ಲಿ ನಡೆಯುವ ಸುದ್ದಿಗಳ ರೌಂಡ ಅಪ್ ನಿಮ್ಮ k2 ಎಕ್ಸ್‌ಪ್ರೆಸ್‌ ನಲ್ಲಿ ವೀಕ್ಷಿಸಿ.

ನಾರಾಯಣಪುರದ ಜಲಾಶಯದಿಂದ (Narayanpur dam) ಕೃಷ್ಣಾ ನದಿಗೆ (Krishna river) 22 ಗೇಟ್ ಗಳ ಮೂಲಕ 1.50 ಲಕ್ಷ ಕ್ಯೂಸೆಕ್‍ ನೀರು ಹರಿಸಲಾಗುತ್ತಿದೆ. ತಾಲ್ಲೂಕಿನ ಹೂವಿನಹೆಡಗಿ ಗ್ರಾಮದ ಬಳಿಯ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ (Temple) ಸಂಪೂರ್ಣ ಮುಳುಗಡೆಯಾಗಿದ್ದು, ಸೇತುವೆ ಮುಳುಗಲು ಕೆಲವೇ ಅಡಿಗಳು ಬಾಕಿ ಇದೆ.

ಅಧಿವೇಶನದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ರಾಜ್ಯದ ಅಭಿವೃದ್ಧಿ, ರೈತರ ಸಮಸ್ಯೆ, ಯುವಕರ ನಿರುದ್ಯೋಗ ಸಮಸ್ಯೆ, ಈಡೇರಿಸುವ ಬದಲು ಭ್ರಷ್ಟಾಚಾರವನ್ನು ಹಿಡಿದುಕೊಂಡು ಕಚ್ಚಾಡುತ್ತಾ ಕುಳಿತಿದ್ದಾರೆ. ಇದನ್ನು ಬಿಟ್ಟು ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ ಒತ್ತಾಯಿಸಿದರು.

ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ, ಗೂಳಿಗಡ್ಡೆ ಬಸವೇಶ್ವರ ದೇವಸ್ಥಾನ ಸಂಪೂರ್ಣ ಮುಳುಗಿದೆ. ನೀರಿನಲ್ಲಿ ಇಳಿದು ನಮಸ್ಕರಿಸಲು ಮುಂದಾದ ಭಕ್ತನೂರ್ವನಿಗೆ ಅದೇನು ಕಾಣಿಸ್ತೊ ಗೊತ್ತಿಲ್ಲ ಎದ್ನೋ ಬಿದ್ನೋ ಅಂತ ಓಡಿ ಹೋದ ವೀಡಿಯೋ ನೋಡಿ ಹೇಗಿದೆ.

ರಾಮತ್ನಾಳ ಗ್ರಾಮದಿಂದ ಸಿಂಧನೂರಿಗೆ ಹೆಚ್ಚುವರಿ ಬಸ್ ಬಿಡುವಂತೆ ಒತ್ತಾಯಿಸಿ, ಇಂದು ವಿದ್ಯಾರ್ಥಿಗಳು ಸಿಂಧನೂರು ನಗರದ ಸಾರಿಗೆ ಇಲಾಖೆ ಘಟಕದ ಮುಂಭಾಗದಲ್ಲಿ ಪ್ರತಿಭಟನೆ ಮಾಡಿ, ಘಟಕದ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದರು. ಇರುವ ಒಂದು ಬಸ್ಸು ಹಿಂದಿನ ಎರಡು ಗ್ರಾಮಗಳಿಗೆ ಭರ್ತಿಯಾಗಿ ಬರುತ್ತದೆ. ಕಾಲು ಇಡಲು ಸ್ಥಳ ಇರುವುದಿಲ್ಲ ಹಾಗಾಗಿ ಹೆಚ್ಚುವರಿ ಬಸ್ ಬಿಡಲು ಒತ್ತಾಯಿಸಿದರು.

WhatsApp Group Join Now
Telegram Group Join Now
Share This Article