K2kannadanews.in
Degree college ರಾಯಚೂರು : ಸರಕಾರ ನಿರ್ಲಕ್ಷ್ಯ ಧೋರಣೆ ಬಿಟ್ಟು ಗಬ್ಬೂರು ಹೋಬಳಿ ಕೇಂದ್ರ ಸ್ಥಾನದಲ್ಲಿ ಸರಕಾರಿ ಪದವಿ ಕಾಲೇಜ್ ಹಾಗೂ ಪದವಿ ಹಾಸ್ಟೆಲ್ ಮಂಜೂರಿ ಮಾಡಬೇಕು ಎಂದು ಪ್ರಗತಿಪರ ಸಮಘಟನೆಗಳ ಒಕ್ಕೂಟದಿಂದ ಒತ್ತಾಯಿಸಲಾಯಿತು.
ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮಕ್ಕೆ ಪದವಿ ಕಾಲೇಜು ನೀಡಲು ಒತ್ತಾಯಿಸಿದರು. ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣ ಮತ್ತು ಆರೋಗ್ಯ ಸವಲತ್ತಿನಿಂದ ಅತೀ ಹಿಂದುಳಿದಿರುವ ದೇವದುರ್ಗ ತಾಲೂಕಿನ ಗಬ್ಬೂರು ಹೋಬಳಿ ಕೇಂದ್ರ ಸ್ಥಾನದಲ್ಲಿ ಸರಕಾರಿ ಪದವಿ ಕಾಲೇಜ್ ಹಾಗೂ ಪದವಿ ಹಾಸ್ಟೆಲ್ ಮಂಜೂರಿ ಮಾಡಬೇಕು ಮತ್ತು ಗಬ್ಬೂರು ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಿ ಸಮುದಾಯ ಆರೋಗ್ಯ ಕೇಂದ್ರ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕಿನ ಗಬ್ಬೂರು ಹೋಬಳಿ 40 ಹಳ್ಳಿಗಳನ್ನು ಒಳಗೊಂಡು ಬಹುದೊಡ್ಡ ಹೋಬಳಿ ಕೇಂದ್ರ ಸ್ಥಾನ 97,000 ಹೆಕ್ಟರ್ ವಿಶಾಲವಾದ ಭೂಪ್ರದೇಶ ಹೊಂದಿದ್ದು, ಸರಕಾರಕ್ಕೆ ಅತೀಹೆಚ್ಚಿನ ಕಂದಾಯಕರ ಸಂದಾಯ ಮಾಡಿದರು ಮೂಲಭೂತ ಸೌಕರ್ಯಕ್ಕಾಗಿ ಜನಸಮಾನ್ಯರು ಹಾಗು ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬದುಕಿಗಾಗಿ ದಿನನಿತ್ಯ ಹರಸಹಾಸ ಪಡುತ್ತಿದ್ದಾರೆ. ಇನ್ನೂ ವಿದ್ಯಾರ್ಥಿಗಳ ಪಾಡು ತಮ್ಮ ಉನ್ನತ ವ್ಯಾಸಾಂಗಕ್ಕಾಗಿ ಗ್ರಾಮಗಳಿಂದ ಗಬ್ಬೂರು ಕೇಂದ್ರ ಸ್ಥಾನಕ್ಕೆ ಬರಲು 30ಕಿ.ಮಿ ಪ್ರಯಾಣ ಮತ್ತೆ ಇಲಿಂದ ರಾಯಚೂರು ಅಥವಾ ದೇವದುರ್ಗಕ್ಕೆ ಹೋಗಬೇಕಾದರೆ ಮತ್ತೆ 30 ಕಿ.ಮಿ ಒಟ್ಟು 60ಕಿ,ಮಿ ಬಸ್ ಪ್ರಯಾಣ ಮಾಡಿ ತಮ್ಮ ಉಜ್ವಲ ಬದುಕು ಕಟ್ಟಿಕೊಳ್ಳಲು ದಿನಂಪ್ರತಿ ಹೆಣಗಾಡುತ್ತಿದ್ದಾರೆ.
ಗಬ್ಬೂರು ಹೋಬಳಿ ಹಾಗೂ ಹಳ್ಳಿಗಳಲ್ಲಿ 19 ಹೆಚ್ಚು ಪ್ರೌಢಶಾಲೆಗಳು, 1 ಸರಕಾರಿ ಹಾಗೂ 4 ರಿಂದ 5 ಖಾಸಗಿ ಪಿ.ಯು ಕಾಲೇಜುಗಳಿವೆ. ಪದವಿ ಮತ್ತು ಉನ್ನತ ವ್ಯಾಸಾಂಗಕ್ಕಾಗಿ ನಿತ್ಯ ರಾಯಚೂರಿಗೆ ಹೋಗಬೇಕು. ಮತ್ತು ವಿದ್ಯಾರ್ಥಿನಿಯರ ಪಾಡು ಹೇಳತೀರದು ಗಬ್ಬೂರಲ್ಲಿ ಸರಕಾರಿ ಪದವಿ ಕಾಲೇಜು ಇಲ್ಲದ ಕಾರಣ ವಿದ್ಯಾಭ್ಯಾಸ ಮೊಟಕುಗೊಳಿಸಿ ಬಾಲ್ಯವಿವಾಹಕ್ಕೆ ಬಲಿಯಾಗುತ್ತಿದ್ದಾರೆ ಎಂದು ಆರೋಪಿಸಿದರು.