ಸಾರಿಗೆ ಬಸ್ ಸ್ಟೇರಿಂಗ್ ಕಟ್ ಆಗಿ ಉರುಳಿಬಿದ್ದ ಬಸ್ : 30 ವಿದ್ಯಾರ್ಥಿಗಳಿಗೆ ಗಾಯ..

K 2 Kannada News
ಸಾರಿಗೆ ಬಸ್ ಸ್ಟೇರಿಂಗ್ ಕಟ್ ಆಗಿ ಉರುಳಿಬಿದ್ದ ಬಸ್ : 30 ವಿದ್ಯಾರ್ಥಿಗಳಿಗೆ ಗಾಯ..
WhatsApp Group Join Now
Telegram Group Join Now

K2kannadanews.in

bus overturn ರಾಯಚೂರು : ಈಶಾನ್ಯ ಸಾರಿಗೆ ಬಸ್ ನ (NERTC) ಸ್ಟೇರಿಂಗ್ (Steering) ಕಟ್ ಬಸ್ ಪಲ್ಟಿಯಾದ (bus overturn) ಘಟನೆ ನಡೆದಿದ್ದು, 30ಕ್ಕೂ ಹೆಚ್ಚು ಸ್ಕೂಲ್ ಮಕ್ಕಳಿಗೆ (School students) ಗಾಯವಾದ ಘಟನೆ ನಡೆದಿದೆ.

ರಾಯಚೂರು (Raichur) ತಾಲ್ಲೂಕಿನ ಸಗಮಕುಂಟಾ ಗ್ರಾಮದ ಬಳಿ ಘಟನೆ ನಡೆದಿದೆ. ಕೋರ್ವಿಹಾಳ ದಿಂದ ರಾಯಚೂರಿಗೆ ಬರುತ್ತಿದ್ದ ಈಶಾನ್ಯ ಸಾರಿಗೆ ಬಸ್ ಮುಂದೆ ಬರುತ್ತಿದ್ದ ವಾಹನಕ್ಕೆ ಸೈಡ್ ಕೊಡುತ್ತಿದ್ದ ವೇಳೆ ಹದಗೆಟ್ಟ ರಸ್ತೆಯಿಂದ ಸ್ಟೇರಿಂಗ್ ಕಟ್ ಆಗಿದೆ. ಇದರಿಂದ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿದೆ.

ಘಟನೆಯಲ್ಲಿ ಬಸ್ ನಲ್ಲಿ ಇದ್ದ ಕೋರ್ವಿಹಾಳ ಗ್ರಾಮದ ವಿದ್ಯಾರ್ಥಿನಿ ‌ಸಂಗೀತಾಗೆ ಗಂಭೀರ ಗಾಯವಾಗಿದೆ ಎಂದು ಹೇಳಲಾಗುತ್ತಿದ್ದು, ಗಾಯಗೊಂಡ 9ನೇ ತರಗತಿ ವಿದ್ಯಾರ್ಥಿನಿಗೆ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

WhatsApp Group Join Now
Telegram Group Join Now
Share This Article