ಜುಲೈ 4 ವಿದ್ಯಾರ್ಥಿ ಸಂಘಟನೆಗಳು ದೇಶಾದ್ಯಂತ ಶಾಲಾ-ಕಾಲೇಜು ಬಂದ್‌ಗೆ ಕರೆ..!

K 2 Kannada News
ಜುಲೈ 4 ವಿದ್ಯಾರ್ಥಿ ಸಂಘಟನೆಗಳು ದೇಶಾದ್ಯಂತ ಶಾಲಾ-ಕಾಲೇಜು ಬಂದ್‌ಗೆ ಕರೆ..!
Oplus_0
WhatsApp Group Join Now
Telegram Group Join Now

K2kannadanews.in

Neet, net band call ರಾಯಚೂರು : ನೀಟ್ (Neet) ಮತ್ತು ನೆಟ್ (Net) ಪರೀಕ್ಷೆ ಪ್ರಶ್ನೆ ಪತ್ರಿಕೆ (Question) ಸೋರಿಕೆ ಕುರಿತು ತನಿಖೆಗೆ (investigation) ಆಗ್ರಹಿಸಿ ವಿದ್ಯಾರ್ಥಿ ಸಂಘಟನೆಗಳು ಜುಲೈ 4 ರಂದು ದೇಶಾದ್ಯಂತ ಶಾಲಾ-ಕಾಲೇಜು (school-college) ಬಂದ್‌ಗೆ ಕರೆ ನೀಡಿವೆ.

ಕಳೆದ ಐದು ವರ್ಷಗಳಲ್ಲಿ (last 5 years) 65 ಪೇಪರ್ (paper) ಘಟನೆಗಳು ನಡೆದಿದ್ದು, ಪೇಪರ್ ಸೋರಿಕೆಯಿಂದ ವಿದ್ಯಾರ್ಥಿಗಳು (Students) ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಸಂಸತ್ತಿನಲ್ಲಿ (Parliament) ಚರ್ಚಿಸಿ ನ್ಯಾಯ ಕೊಡಿಸುವಂತೆ ಮೋದಿ (Modi) ಅವರನ್ನು ಕೋರಿದ್ದಾರೆ. ಇನ್ನು ಒನ್ ನೇಷನ್-ಒನ್ ಎಕ್ಸಾಮ್ (One Nation one exam) ನೆಪದಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಪಾಯ (Student life) ತಂದೊಡ್ಡಿದೆ ಎಂದು ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಆರೋಪಿಸಿದ್ದು, ಇಡೀ ಪರೀಕ್ಷಾ ವ್ಯವಸ್ಥೆಯೇ ಕುಸಿದಿದೆ. ಒಟ್ಟಿನಲ್ಲಿ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳನ್ನು (National leave exam) ನಡೆಸಲು ಎನ್‌ಟಿಎ ವಿಫಲವಾಗಿದೆ ಎಂದು ಹೇಳಿದ್ದು, ದೇಶದಲ್ಲಿ ಶಿಕ್ಷಣ ವ್ಯವಸ್ಥೆಯ ಮೇಲಿನ ದಾಳಿಯನ್ನು ವಿರೋಧಿಸಿ ಎಸ್‌ಎಫ್‌ಐ ಕೇಂದ್ರ ಕಾರ್ಯಕಾರಿ ಸಮಿತಿಯು ಜುಲೈ 4 ರಂದು ರಾಷ್ಟ್ರವ್ಯಾಪಿ ಬಂದ್‌ಗೆ ಕರೆ ನೀಡಿದೆ.

ವಿಶ್ವವಿದ್ಯಾನಿಲಯಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಪಿಎಚ್‌ಡಿ ಪ್ರವೇಶಕ್ಕಾಗಿ ಇತ್ತೀಚೆಗೆ ಅನುಮೋದಿಸಲಾದ ಕಡ್ಡಾಯ ನೆಟ್ ಸ್ಕೋರ್ ವ್ಯವಸ್ಥೆಯನ್ನು ಹಿಂಪಡೆಯಲು ವಿದ್ಯಾರ್ಥಿ ಸಂಘಗಳು ಒತ್ತಾಯಿಸಿವೆ. ಎನ್‌ಟಿಎ ಪದ್ಧತಿಯನ್ನು ರದ್ದುಪಡಿಸಬೇಕು ಮತ್ತು ನೀಟ್ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಎಂದೂ ಆಗ್ರಹಿಸಿದ್ದಾರೆ.

WhatsApp Group Join Now
Telegram Group Join Now
Share This Article