K2kannadanews.in
Raichur News ರಾಯಚೂರು : ಪತ್ರತಿನಿತ್ಯ ರಾಯಚೂರು (Raichur city news) ನಗರದಲ್ಲಿ ನಡೆಯುವ ಸುದ್ದಿಗಳ ರೌಂಡ ಅಪ್ ನಿಮ್ಮ k2 ಎಕ್ಸ್‌ಪ್ರೆಸ್ ನಲ್ಲಿ ವೀಕ್ಷಿಸಿ.
ಬಳ್ಳಾರಿ(Ballary) ಜಿಲ್ಲೆಯ ಸಂಡೂರು (Sanduru) ತಾಲೂಕಿನ ದೇವದಾರಿ ಅರಣ್ಯ (Devadari Forest) ಪ್ರದೇಶವನ್ನು, ಅಧಿರು ಕಂಪನಿಗೆ ಕೊಡುವ ನಿರ್ಧಾರವನ್ನ ಕೈಬಿಡಬೇಕು ಎಂದು ಒತ್ತಾಯಿಸಿ ಸಿಂಧನೂರಿನ (sindhanuru) ರವಿ ಗೌಡ, ಇಂದು ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ (HD kumaraswamy) ಅವರಿಗೆ, ರಕ್ತದಲ್ಲಿ ಪತ್ರ (Blood letter) ಬರೆದು ಈ ಒಂದು ಯೋಜನೆಯನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.
ಖಾಸಗಿ ಆಸ್ಪತ್ರೆ (privet hospital) ಸಿಬ್ಬಂದಿಗಳ ಮೇಲೆ ಹಲ್ಲೆ (Attack) ಮಾಡಿರುವ ಘಟನೆಯನ ಖಂಡಿಸಿ, ಇಂದು ಸಿಂಧನೂರು ನಗರದ ಗಾಂಧಿ ವೃತ್ತದಲ್ಲಿ (Gandhi cereal) , ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಗಳು ಸೇರಿ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ಪ್ರತಿಭಟನೆ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರ ಸಲ್ಲಿಸಿದರು.
ಗೃಹರಕ್ಷಕ (home gard) ದಳದ ಕಮಾಂಡೆಂಟ್ (comandent) ಜಂಬಣ್ಣ ರಾಮಸ್ವಾಮಿ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದು ಹೋಂ ಗಾರ್ಡ್ ಸಿಬ್ಬಂದಿಗಳು ಪೊಲೀಸ್ ಠಾಣೆ ಬೀಟ್ ಹಾಕಬೇಕಾದರೆ ಹತ್ತರಿಂದ ಹದಿನೈದು ಸಾವಿರ ರೂಪಾಯಿ ಕೊಟ್ಟರೆ ಮಾತ್ರ ಕೆಲಸ ಯೋಜನೆ ಮಾಡುತ್ತಾರೆ ಎಂದು ಕನ್ನಡಿಗರ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷ ವೀರೇಶ್ ಆರೋಪಿಸಿದರು.
ಸಿಂಧನೂರು ನಗರದ ಟೌನ್ ಹಾಲ್ನಲ್ಲಿ ಇಂದು ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಮತ್ತು ಸಮವಸ್ತ್ರಗಳನ್ನು ವಿತರಿಸಲಾಯಿತು ಈ ವೇಳೆ ಮಾತನಾಡಿದ ಶಾಸಕ ಹಂಪನಗೌಡ ಬಾದರ್ಲಿ ಅವರು ಸರ್ಕಾರದ ಯೋಜನೆಗಳನ್ನ ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ಸಕಾಲಕ್ಕೆ ಮುಟ್ಟಿಸುವಂತೆ ಕರೆ ನೀಡಿದರು.
ಐಎಲ್ ಹೆಚ್ ಎಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ರಾಯಚೂರು ಜಿಲ್ಲೆಯ ಜನತಾ ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ರಂತೆ ಆರೋಗ್ಯ ಸಹಾಯಕರನ್ನ ತೆಗೆದುಕೊಂಡು ಅಲ್ಲಿ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಈ ಒಂದು ಯೋಜನೆ ಮಾಡಲಾಗಿದೆ.
ಎಸ್ ಕೆ ಇ ಪ್ಯಾರಾಮೆಡಿಕಲ್ ಕಾಲೇಜು ವತಿಯಿಂದ ನಗರದ ಪಂಡಿತ್ ಜಂಬಲದಿನ್ನಿ ಸಿದ್ದರಾಮ ರಂಗಮಂದಿರದಲ್ಲಿ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನಾಚರಣೆ ಆಚರಣೆ ಮಾಡಲಾಗಿದ್ದು ಎಂದು ಎಲ್ಲಾ ವೈದ್ಯರಿಗೂ ಕೂಡ ಗೌರವ ಸಮರ್ಪಣೆ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಡಾ. ಬಾಬುರಾವ್ ಹೇಳಿದರು