ಈ ಗ್ರಾಮದಲ್ಲಿ ಲವ್‌ ಟ್ಯಾಕ್ಸ್‌ ಕಟ್ಟಬೇಕು : ಕಟ್ಟದಿದ್ದರೆ ಬಹಿಷ್ಕಾರ..!

K 2 Kannada News
ಈ ಗ್ರಾಮದಲ್ಲಿ ಲವ್‌ ಟ್ಯಾಕ್ಸ್‌ ಕಟ್ಟಬೇಕು : ಕಟ್ಟದಿದ್ದರೆ ಬಹಿಷ್ಕಾರ..!
Oplus_0
WhatsApp Group Join Now
Telegram Group Join Now

K2kannadanews.in

Love Tax ತಮಿಳುನಾಡು : ನೀವು ನೀರಿಗೆ ಟ್ಯಾಕ್ಸ್ ಕಟ್ಟಿರ್ತೀರಿ, ಬಿಲ್ಡಿಂಗ್, ಭೂಮಿ ಹೀಗೆ ಎಲ್ಲದಕ್ಕೂ ಟ್ಯಾಕ್ಸ್ ಕಟ್ಟಿರ್ತೀರಿ. ಆದರೆ ಈ ಗ್ರಾಮದಲ್ಲಿ ಯಾರಾದ್ರೂ ಪ್ರೀತಿಸಿ ಮದುವೆಯಾಗಿ ಬಂದರೆ, ಕಡ್ಡಾಯವಾಗಿ ಲವ್‌ ಟ್ಯಾಕ್ಸ್‌ ಕಟ್ಟಲೇಬೇಕು. ಇಲ್ಲದಿದ್ದರೆ ಗ್ರಾಮದಿಂದ ಅವರಿಗೆ ಬಹಿಷ್ಕಾರ ಹಾಕಲಾಗುತ್ತದೆ. ಎಲ್ಲಪ್ಪಾ ಅಂತೀರಾ ಈ ಸುದ್ದಿ ನೋಡಿ.

ಹೌದು ಇದಾವುದು ಸರಕಾರದ್ದಲ್ಲ, ಬದಲಾಗಿ ಗ್ರಾಮಸ್ಥರೇ ಮಡಿಕೊಂಡ ನಿಯಮ. ಈ ತೆರಿಗೆ ಪದ್ಧತಿಯನ್ನು ಕುತ್ರ ವಾರಿ ಅಂತಾರೆ. ತಮಿಳಿನಲ್ಲಿ ಕುತ್ರ ಅಂದ್ರೆ ಅಪರಾಧ, ವರಿ ಅಂದ್ರೆ ತೆರಿಗೆ ಎಂದರ್ಥ. ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ, ವಡಕ್ಕಲೂರು ಎಂಬ ಗ್ರಾಮದಲ್ಲಿ ಇಂತವಂತ ವಿಚಿತ್ರ ಆಚರಣೆ. ವಡಕ್ಕಲೂರು ಗ್ರಾಮದಲ್ಲಿ ಬಹುತೇಕ ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರೇ ಹೆಚ್ಚಿದ್ದಾರೆ.‌ ಈಗಲೂ ಅಲ್ಲಿ ಅನಕ್ಷರತೆ ಬಡತನ ತಾಂಡವವಾಡುತ್ತಿದೆ.. ಹೀಗಾಗಿ ದಶಕಗಳಿಂದ ಬಂದ ಆಚರಣೆಯನ್ನು ಈಗಲೂ ಮುಂದುವರೆಸಿದ್ದಾರೆ. ಈ ಗ್ರಾಮದಲ್ಲಿ 220 ಮನೆಗಳಿದ್ದು, ಊರಿನಲ್ಲಿ ಯಾರಾದರೂ ಪ್ರೇಮ ವಿವಾಹವಾದರೆ, ಅವರಿಗೆ ಹಲವಾರು ಷರತ್ತುಗಳನ್ನು ವಿಧಿಸಲಾಗುತ್ತದೆ.‌

ಗ್ರಾಮ ದೇವರಾದ ಕರುಪ್ಪರಾಯನ ದೇವಸ್ಥಾನಕ್ಕೂ ನಿಷೇಧ ಹೇರಲಾಗುತ್ತಿದೆ. ಇದರ ಜೊತೆ ಟ್ಯಾಕ್ಸ್‌ ಕಟ್ಟಿದರೆ ಮಾತ್ರ ಗ್ರಾಮಕ್ಕೆ ಪ್ರವೇಶ ನೀಡಲಾಗುತ್ತದೆ ಎಂಬ ಆರೋಪವಿದೆ. ಈ ಗ್ರಾಮದಲ್ಲಿ ಪ್ರೀತಿಸಿ ಮದುವೆಯಾದ ಜೋಡಿಗಳಿಗೆ ಗ್ರಾಮಸ್ಥರು ಊರಿಗೆ ಸೇರಿಸಿಕೊಳ್ಳೋದಿಲ್ಲ. ಊರಿಗೆ ಎಂಟ್ರಿ ಆಗಬೇಕು ಅಂದ್ರೆ ಟ್ಯಾಕ್ಸ್‌ ಕಟ್ಟಬೇಕು. ಪ್ರೇಮ ವಿವಾಹವಾದ ಜೋಡಿಗಳನ್ನು ಕುತ್ರ ವರಿ (ಅಪರಾಧ ತೆರಿಗೆ) ಪಾವತಿಸಿ ಗ್ರಾಮಕ್ಕೆ ಪ್ರವೇಶಿಸುವ ಪರಿಪಾಠ ದಶಕಗಳಿಂದ ನಡೆಯುತ್ತಿದೆ. ಈ ಒಂದು ಮಾಹಿತಿ ಅರಿತ ಕೊಯಮತ್ತೂರಿನ ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ ಟ್ಯಾಕ್ಸ್‌ ಹಾಕುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿಕೊಂಡಿದ್ದಾರೆ.

WhatsApp Group Join Now
Telegram Group Join Now
Share This Article