K2kannadanews.in
KSRTC ರಾಯಚೂರು : ಪ್ರಯಾಣಿಕನೊಬ್ಬ ಬಸ್ಸಿನಲ್ಲಿ (BUS) 2.5 ಲಕ್ಷ (Lak) ರೂ. ಹಣವನ್ನು (Money) ಬಿಟ್ಟುಹೊಗಿದ್ದ, ಇದನ್ನು ನೋಡಿದ ಕೆಎಸ್ಆರ್ಟಿಸಿ ನಿರ್ವಾಹಕ (Conductor) ಮತ್ತು ಚಾಲಕ (Driver) ಹಿಂದಿರುಗಿಸಿ ಮಾನವೀಯತೆ (Humanity) ಮೇರೆದಿರುವ ಘಟನೆ ರಾಯಚೂರು ನಗರದ ಬಸ್ ನಿಲ್ದಾಣದಲ್ಲಿ (Bus stop) ನಡೆದಿದೆ.
ರಾಯಚೂರು (Raichur) ಜಿಲ್ಲೆಯ ಮಾನ್ವಿ (Manvi) ಮೂಲದ ಸೋಮಶೇಖರ್ ಎನ್ನುವವರು ಹುಬ್ಬಳ್ಳಿ-ಹೈದರಾಬಾದ್ (Hubbli- Hyderabad) ಬಸ್ನಲ್ಲಿ ಹಣದ ಬ್ಯಾಗ್ ಬಿಟ್ಟುಹೋಗಿದ್ದಾರೆ. ಕೆಎಸ್ಆರ್ಟಿಸಿ ಬಸ್ ಚಾಲಕ ಹನಮಂತ್ (Hanumata) ಹಾಗೂ ಕಂಡಕ್ಟರ್ ಮಂಜುನಾಥ್ (Manjunata) ಪ್ರಾಮಾಣಿಕತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿನ್ನೆ ಮಧ್ಯಾಹ್ನ (afternoon) ಮಾನ್ವಿಯಿಂದ ಇದೇ ಬಸ್ನಲ್ಲಿ ರಾಯಚೂರಿಗೆ ಸೋಮಶೇಖರ್ ಆಗಮಿಸಿದ್ದರು. ಈ ವೇಳೆ 2.5 ಲಕ್ಷ ರೂ. ಇದ್ದ ಹಣದ ಬ್ಯಾಗ್ನ್ನು ಬಸ್ನಲ್ಲೇ ಬಿಟ್ಟು ಇಳಿದಿದ್ದಾರೆ.
ಬಳಿಕ ಹೈದರಾಬಾದ್ನಲ್ಲಿ ಲಗೇಜ್ ಕ್ಯಾರಿಯರ್ನಲ್ಲಿ ಬ್ಯಾಗ್ (Bag) ಪರಿಶೀಲನೆ ವೇಳೆ ಹಣ ಪತ್ತೆ ಹಿನ್ನೆಲೆ ಬ್ಯಾಗ್ನಲ್ಲಿದ್ದ ಬ್ಯಾಂಕ್ ಪಾಸ್ಬುಕ್ (Pass book) ತಪಾಸಣೆ ಮಾಡಲಾಗಿದೆ. ಆ ಬಳಿಕ ಅದರಲ್ಲಿದ್ದ ಫೋನ್ ನಂಬರ್ (phone number) ಮೂಲಕ ಸೋಮಶೇಖರ್ಗೆ ಕರೆ ಮಾಡಲಾಗಿದೆ. ಇಂದು ಮರಳಿ ಹೈದರಾಬಾದ್ನಿಂದ ಆಗಮಿಸುವ ವೇಳೆ ರಾಯಚೂರಿನಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಸೋಮಶೇಖರ್ಗೆ ಹಸ್ತಾಂತರ ಮಾಡಲಾಗಿದೆ.