K2kannadanews.in
Viral video ಮಹಾರಾಷ್ಟ್ರ : ಇತ್ತೀಚಿನ ಯುವ ಜನತೆಯಲ್ಲಿ ರೀಲ್ಸ್ (Reels) ಹುಚ್ಚು ಹೆಚ್ಚಾಗಿ, ಪ್ರಖ್ಯಾತಿಯಾಗಲು (Famous) ದುಸ್ಸಾಹಸಕ್ಕೆ ಕೈ ಹಾಕಿ ಪ್ರಾಣ (Life) ಕಳೆದುಕೊಳ್ಳುವ ಮಟ್ಟಿಗೆ ಹೋಗುತ್ತಿದ್ದಾರೆ. ಅದಕ್ಕೆ ನಿದರ್ಶನ ಎಂಬಂತೆ 25 ವರ್ಷದ ಯುವತಿಯೊಬ್ಬಳು (Women) ಪರ್ವತದಲ್ಲಿ (Hill) ರೀಲ್ಸ್ ಮಾಡಲು ಹೋಗಿ ದಾರುಣ ಸಾವು ಕಂಡಿದ್ದಾಳೆ.
ಹೌದು ಮಹಾರಾಷ್ಟ್ರದ (Maharashtra) ಸಂಭಾಜಿನಗರ (Sambaji nagar) ಜಿಲ್ಲೆಯ ಸುಲಿಭಂಜನ್ ಗ್ರಾಮದ ಬೆಟ್ಟದ ಮೇಲೆ ಕಾರ್ಅನ್ನು ರಿವರ್ಸ್ (Car rivers) ಮಾಡುವ ಯತ್ನದಲ್ಲಿ ಎಡವಿದ ಯುವತಿ, 300 ಅಡಿ (Feet) ಆಳದ ಕಂದಕಕ್ಕೆ (abyss) ಬಿದ್ದು ಸಾವು (Died) ಕಂಡಿದ್ದಾಳೆ. ಈ ಎಲ್ಲಾ ಘಟನೆಯು ಯುವತಿಯ ಸ್ನೇಹಿತನ ಮೊಬೈಲ್ (Friend mobile) ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೆಟ್ಟದ ಮೇಲೆ ಆಕೆ ಕಾರ್ ರಿವರ್ಸ್ ಮಾಡೋದನ್ನ ಯುವಕ ಮೊಬೈಲ್ನಲ್ಲಿ ರೆಕಾರ್ಡ್ ಮಾಡುತ್ತಿದ್ದ. ಸುಲಿಭಂಜನ್ ಗ್ರಾಮದ ದತ್ತ ಮಂದಿರಕ್ಕೆ (Datha temple) ಪ್ರವಾಸಕ್ಕೆ ಮೂವರು ಸ್ನೇಹಿತರು ಪ್ರವಾಸಕ್ಕೆ ತೆರಳಿದ್ದರು.
ಈ ವೇಳೆ ಬೆಟ್ಟದ ತುದಿ ಮೇಲೆ ಕಾರು ನಿಲ್ಲಿಸಿ ರೀಲ್ಸ್ ಮಾಡುವ ಪ್ರಯತ್ನ ಮಾಡಿದ್ದರು. ಈ ವೇಳೆ ಕಾರ್ನಲ್ಲಿ ಕುಳಿದ ಶ್ವೇತಾ ದೀಪಕ್ ಸುರ್ವಾಸೆ ಕಾರ್ ರಿವರ್ಸ್ ತೆಗೆದುಕೊಳ್ಳುವ ಸಾಹಸ ಮಾಡಿದ್ದರು. ಡ್ರೈವಿಂಗ್ (Don’t now driving) ಬಾರದ ಆಕೆ ಯಾವ ರೀತಿಯಲ್ಲಿ ಕಾರ್ ರಿವರ್ಸ್ ತೆಗೆದುಕೊಳ್ಳುತ್ತಾರೆ ಅನ್ನೋದನ್ನ ಆಕೆಯ ಸ್ನೇಹಿತ ಸೂರಜ್ ಸಂಜೌ ರೆಕಾರ್ಡ್ ಮಾಡುತ್ತಿದ್ದ. ಆದರೆ, ತನ್ನ ಹಿಂದಿದ್ದ ಜಾಗವನ್ನು ಅಂದಾಜು ಮಾಡಲು ವಿಫಲವಾದ ಶ್ವೇತಾ ಇದ್ದ ಕಾರು 300 ಅಡಿ ಆಳವಿದ್ದ ಪ್ರಪಾತಕ್ಕೆ ಬಿದ್ದಿದೆ. ಬರೀ 15 ಸೆಕೆಂಡ್ನಲ್ಲೇ ಯುವತಿಯ ಪ್ರಾಣಪಕ್ಷಿ ಹಾರಿಹೋಗಿದೆ. ಲೈವ್ ಆಯಕ್ಸಿಡೆಂಟ್ ದೃಶ್ಯ (Live accident) ಸಾಮಾಜಿಕ ಜಾಲತಾಣಗಳಲ್ಲಿ (social media) ವೈರಲ್ ಆಗಿದೆ.