K2kannadanews.in
ಸಿಂಧನೂರು : ಸನ್ ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಸಿಂಧನೂರು ನಗರದಲ್ಲಿ ರಕ್ತದಾನಿಗಳ ದಿನದ ಅಂಗವಾಗಿ, ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಸನ್ಪ್ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಸಿಂದನೂರು ನರ್ಸಿಂಗ್, ಪ್ಯಾರಾಮೆಡಿಕಲ್ ಹಾಗೂ ಶ್ರೀ ಶಕ್ತಿ ರಕ್ತ ಬಂಡಾರ ಸಿಂಧನೂರು ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ರಕ್ತದಾನಗಳ ದಿನಾಚರಣೆ ಅಂಗವಾಗಿ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ ಹಾಗೂ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದವರಿಗೆ ಸನ್ಮಾನ ಹಮ್ಮಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಸಿಂಧನೂರು ನಗರದ ತಶಿಲ್ದಾರ್ ಕಚೇರಿಯಿಂದ ಸನ್ ರೈಸ್ ಕಾಲೇಜಿನವರೆಗೂ ಬೃಹತ್ ಜಾತವನ್ನು ನಡೆಸಿ ರಕ್ತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಯಿತು. ಸನ್ ರೈಸ್ ಕಾಲೇಜಿನ ಅಧ್ಯಕ್ಷರಾದ ಇರ್ಫಾನ್ ಕೆ, ಶ್ರೀ ಶಕ್ತಿ ರಕ್ತ ಭಂಡಾರದ ಮುಖ್ಯಸ್ಥರಾದ ಸೋಮನಗೌಡ ಬಾದರ್ಲಿ ಚಾಲನೆ ನೀಡಿದರು.
ತದನಂತರ ಸನ್ ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನಲ್ಲಿ ಬೃಹತ್ ರಕ್ತದಾನ ಶಿಬಿರದ ಕಾರ್ಯಕ್ರಮವನ್ನು ಡಾ. ಅಮರ್ ಪಾಟೀಲ್ ಐಎಂಎ ಸೆಕ್ರೆಟರಿ ಇವರು ಉದ್ಘಾಟಿಸಿದರು. ಸನ್ ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನ ಅಧ್ಯಕ್ಷರಾದ ಇರ್ಫಾನ್ ಕೆ ಅತ್ತಾರ್ ಅವರು ಮಾತನಾಡಿ ಸ್ವ ಪ್ರೇರಿತವಾಗಿ , ಸ್ವ ಇಚ್ಛೆಯಿಂದ ಬಂದು ರಕ್ತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ ಅಂತ ತಿಳಿಸುತ್ತಾ ಇವತ್ತಿನ ದಿನ ವೇದಿಕೆ ಮೇಲೆ ರಕ್ತದಾನಿಗಳಾಗಿ ಹಲವು ಬಾರಿ ರಕ್ತದಾನ ಮಾಡಿದಂತ ರಕ್ತದಾನಿಗಳ ಸನ್ಮಾನವು ನನಗೆ ಸಂತೋಷ ಇದೆ ಮುಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಸಹ ಸ್ವಯಂಪೇರ್ತರಾಗಿ ರಕ್ತದಾನ ಮಾಡಬೇಕಾಗಿ ವಿನಂತಿಯನ್ನು ಮಾಡಿಕೊಂಡರು.