ಮಧ್ಯಪ್ರಿಯರಿಗೆ ಶಾಕ್ : ಮತ್ತೆ ಹೆಚ್ಚಲಿದೆ ಮದ್ಯದ ಬೆಲೆ..

K 2 Kannada News
ಮಧ್ಯಪ್ರಿಯರಿಗೆ ಶಾಕ್ : ಮತ್ತೆ ಹೆಚ್ಚಲಿದೆ ಮದ್ಯದ ಬೆಲೆ..
Oplus_0
WhatsApp Group Join Now
Telegram Group Join Now

K2kannadanews.in

liquor price hike : ಆರ್ಥಿಕ ಸಂಪನ್ಮೂಲಗಳ ಸಂಗ್ರಹಕ್ಕಾಗಿ ಸರ್ಕಾರ ಮದ್ಯದ ಬೆಲೆ ಮತ್ತೆ ಹೆಚ್ಚಿಸಲು ಸಿದ್ಧವಾಗಿದೆ ಐದು ಗ್ಯಾರಂಟಿ ಯೋಜನೆಗಳನ್ನು (Guarantee Schemes) ಜಾರಿಗೆ ತಂದು, ಹಲವು ಉಚಿತ ಕೊಡುಗೆಗಳನ್ನು ನೀಡುತ್ತಿರುವ ರಾಜ್ಯ ಸರ್ಕಾರವು (Karnataka Government), ವರ್ಷಕ್ಕೆ ಸುಮಾರು 59 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದೆ.

ಉಚಿತ ಗ್ಯಾರಂಟಿ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲಗಳ ಸಂಗ್ರಹಕ್ಕಾಗಿ ತೀವ್ರ ಕಸರತ್ತು ನಡೆಸುತ್ತಿರುವ ಸರ್ಕಾರ (Government), ದೇಶಿಯ ಮದ್ಯಗಳ ಬೆಲೆ ಏರಿಕೆಗೆ ನಿರ್ಧರಿಸಿದ್ದು, ಲಿಕ್ಕರ್ ದರ ಏರಿಕೆಗೆ ಅಬಕಾರಿ ಇಲಾಖೆ (excise deportment) ಪ್ಲಾನ್ ಮಾಡಿದ್ದು, ಶೀಘ್ರವೇ ಅನುಮೋದನೆ ನೀಡಲು ಮುಂದಾಗಿದೆ. ರಾಜ್ಯದಲ್ಲಿ 2023ರ ಜುಲೈನಲ್ಲಿ (July) ದೇಶೀಯ ಮದ್ಯಗಳ ಬೆಲೆ (Prize) ಹೆಚ್ಚಿಸಲಾಗಿತ್ತು. ನಂತರ ಲಿಕ್ಕರ್ ಕಂಪನಿಗಳು (Company) ಬಿಯರ್ ದರ ಏರಿಕೆ ಮಾಡಿದವು. ಲಿಕ್ಕರ್ ದರವನ್ನ 20 ರೂಪಾಯಿಗೆ ಏರಿಕೆ ಮಾಡಿತ್ತು. ಈಗ ಮತ್ತೆ ಮದ್ಯದ ಬೆಲೆಯಲ್ಲಿ ಹೆಚ್ಚಳ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ.

ಲೋಕಸಭೆ ಚುನಾವಣೆ (lok sabha election) ಮುಕ್ತಾಯಗೊಂಡಿದೆ. ಇದೀಗ ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ ಸಂಪನ್ಮೂಲ ಕ್ರೋಢೀಕರಣ ಮಾಡಲು ವರ್ಷದಲ್ಲೇ 3ನೇ ಬಾರಿ ಮದ್ಯದ ಬೆಲೆಯೇರಿಕೆ ಮಾಡಲು ಹೊರಟಿದ್ದು, ಸದ್ಯದಲ್ಲೇ ಬೆಲೆಯೇರಿಕೆ ಘೋಷಣೆ ಮಾಡಲು ಚಿಂತನೆ ನಡೆಸಿದೆ. ಒಂದು ವೇಳೆ ರಾಜ್ಯ ಸರ್ಕಾರ ಬೆಲೆಯೇರಿಕೆ ಮಾಡಿದರೆ ಓಲ್ಡ್ ಮಾಂಕ್, ಎಂಸಿ ರಮ್, ಬಿಪಿ, ಒಟಿ ಹಾಗೂ 8 ಪಿಎಂ ಬ್ರಾಂಡ್‌ನ ಮದ್ಯದ ಬಾಟಲಿಗಳ ಬೆಲೆಯೇರಿಕೆ ಆಗಲಿದೆ. ಇದು ಮದ್ಯಪ್ರಿಯರಿಗೆ ದೊಡ್ಡ ಆಘಾತ ನೀಡಲಿದೆ.

WhatsApp Group Join Now
Telegram Group Join Now
Share This Article