K2kannadanews.in
cylinder exploded : ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗುತ್ತಿರುವ ಕೆಲ ವಿಡಿಯೋಗಳಿಂದ (Video’s) ನಾವು ಎಚ್ಚೆತ್ತುಕೊಳ್ಳಬೇಕಾದ ಅವಶ್ಯಕತೆ ಇದೆ. ಅಡುಗೆ ಮನೆಯಲ್ಲಿ (Kichan) ಸಿಲಿಂಡರ್ ಸ್ಫೋಟಗೊಂಡು (cylinder exploded) ಮಹಿಳೆ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿರುವ ವಿಡಿಯೋ ವೈರಲ್ ಆಗಿದೆ.
ಸಿಲೆಂಡರ್ ಸ್ಪೋಟಗೊಂಡ ರಭಸಕ್ಕೆ ಅಡುಗೆ ಮನೆಯಲ್ಲಿದ್ದ ಸಾಮಗ್ರಿಗಳು (Material) ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮಹಿಳೆ ಹೆದರುತ್ತಾ ಕೂಗಿಕೊಂಡು (Shouting) ಅಡುಗೆ ಮನೆಯಿಂದ ಹೊರಗೆ ಓಡಿದ್ದಾರೆ. ವ್ಯಕ್ತಿಯೊಬ್ಬರು (Man) ಅಡುಗೆ ಮನೆಯ ಬಳಿ ಬಂದು ಆಗಿರುವ ಅವಾಂತರವನ್ನು ನೋಡಿ ವಾಪಸ್ ಹೋಗಿರುವುದನ್ನು ಕಾಣಬಹುದು.
https://x.com/klip_ent/status/1799570173935980762?t=7doJpU5hM_hYUoCieyGURg&s=19
ಅದೃಷ್ಟವಶಾತ್ ಸ್ಪೋಟಗೊಂಡ (blasts time) ವೇಳೆ ಸಿಲಿಂಡರ್ ತುಂಬಿದ್ದಾಗಿರಲಿಲ್ಲ ಎಂಬುದು ತಿಳಿದುಬಂದಿದೆ, ತುಂಬಿದ್ದರೆ ಸ್ಫೋಟದ ತೀವ್ರತೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇತ್ತು. ಜೂನ್ 6 ರಂದು ಘಟನೆ ನಡೆದಿದ್ದು, ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಕ್ಲಿಪ್ ಎಂಟರ್ಟೈನ್ ಎಂಬ ಖಾತೆಯಿಂದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಂತಹ ಘಟನೆಗಳನ್ನು ತಪ್ಪಿಸಲು ಸಿಲಿಂಡರ್ ಅನ್ನು ತೆರೆದ ಪ್ರದೇಶದಲ್ಲಿ ಇಡಬೇಕು.