ಪಾನಿಪುರಿ, ಎಗ್ ಕರಿ ತಿಂದು ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ..

K 2 Kannada News
ಪಾನಿಪುರಿ, ಎಗ್ ಕರಿ ತಿಂದು ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ..
WhatsApp Group Join Now
Telegram Group Join Now

K2kannadanews.in

Food poison ರಾಯಚೂರು : ಸಂಜೆ (Evening) ಸ್ನ್ಯಾಕ್ಸ್ ಟೈಮಲ್ಲಿ ಪಾನಿಪುರಿ (Panipuri), ಯಗ್ ಕರಿ (EGA Carry) ತಿಂದು ಪದವಿ (degree) ಮತ್ತು ಸ್ನಾತಕೋತ್ತರ (PG) 20 ವಿದ್ಯಾರ್ಥಿನಿಯರು (students) ಅಸ್ವಸ್ಥಗೊಂಡ ಘಟನೆ ಕೃಷಿ ವಿಶ್ವವಿದ್ಯಾಲಯ (agriculture) ಆವರಣದಲ್ಲಿನ ವಸತಿ ನಿಲಯದಲ್ಲಿ ನಡೆದಿದೆ.

ರಾಯಚೂರು (Raichur) ನಗರದ ಹೊರವಲಯದ್ದಲ್ಲಿನ, ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಇರುವ, ಉದಯ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ (Hostel) ಘಟನೆ ಜರುಗಿದೆ. ಎಂದಿನಂತೆ ವಿದ್ಯಾರ್ಥಿನಿಯರಿಗೆ ಸಂಜೆ 4ಗಂಟೆ ವೇಳೆಗೆ ಸ್ನಾಕ್ಸ್ (Snack’s) ನೀಡಲಾಗುತ್ತದೆ. ಈ ವೇಳೆ ವಿದ್ಯಾರ್ಥಿನಿಯರಿಗೆ ಏನು ಬೇಕು ಎಂಬ ಬಗ್ಗೆ ಮೆನುವಿನಿಂದ (Manu) ಆರ್ಡರ್ ಪಡೆದುಕೊಂಡು, ವಿದ್ಯಾರ್ಥಿನಿಯರಿಗೆ ಆ ಸ್ನಾಕ್ಸ್ ನೀಡಲಾಗುತ್ತದೆ. ಅದರಂತೆ ನಿನ್ನೆ ವಿದ್ಯಾರ್ಥಿನಿಯರು ಸ್ನ್ಯಾಕ್ಸ್ ಪಾನಿಪುರಿ ಮತ್ತು ರಾತ್ರಿ ಊಟಕ್ಕೆ (Dinner) ಎಗ್ ಕರಿಯನ್ನ ಆರ್ಡರ್ ಮಾಡಿದ್ದಾರೆ.

ಕೆಲ ವಿದ್ಯಾರ್ಥಿನಿಯರು ಮದ್ಯಾನ ಊಟ (Lunch) ಸೇವಿಸಿ ಒಂದಷ್ಟು ಅಸ್ವಸ್ಥಗೊಂಡಿದ್ದರು. ಸಂಜೆ ಪಾನಿಪುರಿ, ರಾತ್ರಿ ಊಟಕ್ಕೆ ಯಗ್ ಕರಿ ತಿಂದದ್ದೇ ಅಸ್ವಸ್ಥಕ್ಕೆ ಕಾರಣವಾಗಿದೆ ಎನ್ನುತ್ತಾರೆ ವಿದ್ಯಾರ್ಥಿನಿಯರು ಎಗ್ ಕರಿ, ಪಾನಿಪುರಿ ತಿಂದು ರಾತ್ರಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಖಾಸಗಿ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆದಿದ್ದಾರೆ. ಪ್ರಸ್ತುತ ಎಲ್ಲಾ ವಿದ್ಯಾರ್ಥಿಗಳು ಆರೋಗ್ಯವಾಗಿದ್ದು ಪಾಲಕರು ಭಯಪಡುವ ಅವಶ್ಯಕತೆ ಇಲ್ಲ. ವೈದ್ಯರನ್ನು ಕರೆಸಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಕೊಡಿಸಲಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯ ಕುಲಪತಿಗಳು ಹೇಳಿದರು.

WhatsApp Group Join Now
Telegram Group Join Now
Share This Article