ರಾಯಚೂರು ಜಿಲ್ಲಾಧಿಕಾರಿಗಳಾಗಿದ್ದ ಇಬ್ಬರು ಐಎಎಸ್‌ ಅಧಿಕಾರಿಗಳೀಗ ಸಂಸದರು..

K 2 Kannada News
ರಾಯಚೂರು ಜಿಲ್ಲಾಧಿಕಾರಿಗಳಾಗಿದ್ದ ಇಬ್ಬರು ಐಎಎಸ್‌ ಅಧಿಕಾರಿಗಳೀಗ ಸಂಸದರು..
WhatsApp Group Join Now
Telegram Group Join Now

K2kannadanews.in

IAS officer’s now MPs ರಾಯಚೂರು : ಹಿಂದೆ ರಾಯಚೂರು ಜಿಲ್ಲಾಧಿಕಾರಿಗಳಾಗಿದ್ದ (DC) ಇಬ್ಬರು ಐಎಎಸ್ (IAS) ಅಧಿಕಾರಿಗಳು, 2024ರ ಲೋಕಸಭೆ ಚುನಾವಣೆಯಲ್ಲಿ (Look sabha election) ಸಂಸದರಾಗಿ ಆಯ್ಕೆಯಾಗಿದ್ದಾರೆ. ಒಬ್ಬರು ನಿವೃತ್ತರಾದರೆ ಮತ್ತೊಬ್ಬರು ಸ್ವಯಂ ನಿವೃತ್ತಿ ಪಡೆದವರು.

ಇಬ್ಬರೂ ಕಾಂಗ್ರೆಸ್‌ (Congress) ಪಕ್ಷಕ್ಕೆ ಸೇರಿ ಲೋಕಸಭೇ ಚುನಾವಣೆಯಲ್ಲಿ ಟಿಕೆಟ್‌ (ticket) ಪಡೆದರು. ಒಬ್ಬರು ಕರ್ನಾಟಕದ ರಾಯಚೂರಿನಿಂದ ಗೆದ್ದರೆ (Won in Raichur), ಮತ್ತೊಬ್ಬರು ತಮಿಳುನಾಡಿನ ತಿರುವಳ್ಳೂರು(TIRUVALLUR ) ಕ್ಷೇತ್ರದಿಂದ ಜಯಗಳಿಸಿದರು, ಈ ಇಬ್ಬರು ಈಗ ಸಂಸತ್ತಿನಲ್ಲಿ ಸದಸ್ಯರಾಗಿ ಕೆಲಸ ಮಾಡುವ ಅವಕಾಶ (opportunity) ಪಡೆದಿದ್ದಾರೆ. ಆಗ ಕಾರ್ಯಾಂಗದಲ್ಲಿದ್ದರು, ಈಗ ಶಾಸಕಾಂಗಕ್ಕೆ ಸೇರಿಕೊಂಡಿದ್ದಾರೆ. ಒಬ್ಬರು ಕರ್ನಾಟಕದವರೇ ಆದ ಜಿ.ಕುಮಾರನಾಯಕ್‌ (Kumar nayak), ಮತ್ತೊಬ್ಬರು ಜಿ.ಸಸಿಕಾಂತ್‌ ಸೇಂಥಿಲ್‌ (Sasikanth Senthil) .

ಕುಮಾರನಾಯಕ್‌ ಅವರು ಮೂರು ವರ್ಷ (3Years) ರಾಯಚೂರು ಡಿಸಿಯಾಗಿದ್ಧಾಗ ಧರ್ಮಸಿಂಗ್‌ ಉಸ್ತುವಾರಿ ಸಚಿವರಾಗಿದ್ದರು. ಆಗ ಜಿಲ್ಲೆಯಲ್ಲಿ ಮಾಡಿದ ಕೆಲಸವಗಳನ್ನು ಜನ ಈಗಲೂ ಸ್ಮರಿಸುತ್ತಾರೆ. ರಾಯಚೂರಿನಲ್ಲಿ ಬರ ನಿರ್ವಹಣೆ, ಗ್ರಂಥಾಲಯಗಳ ನಿರ್ಮಾಣದಂತ ಕೆಲಸಗಳು ಪ್ರಮುಖವಾದವು. ಇನ್ನೂ ಸಸಿಕಾಂತ್‌ ಸೇಂಥಿಲ್‌ ಅವರು ಮೂಲತಃ ತಮಿಳುನಾಡಿದವರು (Thamilunadu). ಐಎಎಸ್‌ ಅಧಿಕಾರಿಯಾಗಿ 2009ರಲ್ಲಿ ಕರ್ನಾಟಕ ಸೇವೆಗೆ ಸೇರಿದರು. ಮಂಡ್ಯದಲ್ಲಿ ತರಬೇತಿ ಮುಗಿಸಿ, ಬಳ್ಳಾರಿಯಲ್ಲಿ ಜಿಲ್ಲಾಪಂಚಾಯಿತಿ ಸಿಇಒ ಆಗಿ, ನಂತರ ರಾಯಚೂರು ಜಿಲ್ಲಾಧಿಕಾರಿಯಾಗಿ ಜಲ್ಲೆಯ ಜನರ ಪ್ರೀತಿ ಗಳಿಸಿ ಕನ್ನಡ ಸಾಹಿತ್ಯ ಸಮ್ಮೇಳನವನ್ನೂ ನಡೆಸಿದ್ದರು.

WhatsApp Group Join Now
Telegram Group Join Now
Share This Article