K2kannadanews.in
Illegal sand mining ಮಾನ್ವಿ : ಪತ್ರಕರ್ತ (journalist) ಅಕ್ರಮವಾಗಿ ಮರಳು (Illegal sand) ಸಂಗ್ರಹಿಸಿ ಬೇರೆ ಬೇರೆ ತಾಲೂಕುಗಳಿಗೆ (taluk) ಸಾಗಾಟ (Transport) ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಂಬಂಧಪಟ್ಟ ಅಧಿಕಾರಿಗಳು (Officer) ಇವರ ವಿರುದ್ಧ ಕ್ರಮ (Action) ಕೈಗೊಳ್ಳಬೇಕು ಎಂದು ನೀರಮಾನ್ವಿ ಗ್ರಾಮದ ಶ್ರೀನಿವಾಸ್ ಕಪಗಲ್ ಅವರು ಒತ್ತಾಯಿಸಿದ್ದಾರೆ.
ರಾಯಚೂರು (Raichur) ಜಿಲ್ಲೆಯ ಮಾನ್ವಿ (manvi) ತಾಲೂಕಿನ ನೀರ ಮಾನವಿ ಗ್ರಾಮದಲ್ಲಿ ಇರುವ ಗುಳಪ್ಪ (Gulappa) ಎಂಬವರು ಪತ್ರಕರ್ತರಾಗಿದ್ದು, ಇದೇ ಗ್ರಾಮದಲ್ಲಿ ತಮ್ಮ ಮನೆಯ ಪಕ್ಕದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸುತ್ತಾರೆ. ತದನಂತರ ಜಿಲ್ಲೆಯ ಮಸ್ಕಿ(Maski), ಲಿಂಗಸಗೂರು (Lingasuguru), ರಾಯಚೂರು (raichur) ತಾಲೂಕುಗಳಿಗೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾರೆ. ವರ್ಷಗಳಿಂದ ಈ ಒಂದು ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
ಈ ಒಂದು ಅಕ್ರಮ ಮರಳುಗಾರಿಕೆ ಬಗ್ಗೆ ಈಗಾಗಲೇ ಎಸಿ (AC), ತಹಸಿಲ್ದಾರ್ (Thashildar), ಆರ್ ಐ kRI) ಅವರಿಗೆ ಮಾಹಿತಿ ನೀಡಲಾಗಿದೆ. ಮರಳು ತಪಾಸಣಾ ಅಧಿಕಾರಿಗಳಿಗೆ ಕರೆ ಮಾಡುವ ಮೂಲಕ ಮಾಹಿತಿ ನೀಡಿದ್ದೇನೆ. ಕೂಡಲೇ ಅಧಿಕಾರಿಗಳು ಪತ್ರಕರ್ತ ಗೂಳಪ್ಪ ಅವರ ವಿರುದ್ಧ ಕ್ರಮ ಕೈಗೊಂಡು ಅವರು ಸಂಗ್ರಹಿಸಿದ ಮರಳು ಜಪ್ತಿ ಮಾಡಬೇಕು ಎಂದು ಒತ್ತಾಯಿಸಿದರು.