ಸಿಂಧನೂರು : ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಿದರೆ ನೀರು ಬರಲ್ಲ ಬೆಂಕಿ ಆರಲ್ಲ..

K 2 Kannada News
ಸಿಂಧನೂರು : ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಿದರೆ ನೀರು ಬರಲ್ಲ ಬೆಂಕಿ ಆರಲ್ಲ..
WhatsApp Group Join Now
Telegram Group Join Now

K2kannadanews.in

Political News ಸಿಂಧನೂರು : ಶಾಸಕ ಹಂಪನಗೌಡ ಬಾದರ್ಲಿ (MLA) ಹಾಗೂ ಅಧಿಕಾರಿಗಳ (Officers) ನಿರ್ಲಕ್ಷ್ಯ ಮತ್ತು ಆಡಳಿತ ವೈಫಲ್ಯದಿಂದ, ಇಂದು ಸಿಂಧನೂರು (Sindhanur) ನಗರದಲ್ಲಿ ನೀರಿಗೆ ಹಾಹಕಾರ (Water problem) ಆಗಿದೆ ಎಂದು ಮಾಜಿ ಸಚಿವ (Ex minister) ವೆಂಕಟರಾವ್ ನಾಡಗೌಡ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸಿಂಧನೂರು ನಗರದ ಕುಷ್ಟಗಿ (Kushtagi road) ರಸ್ತೆಯಲ್ಲಿರುವ ಕುಡಿಯುವ ನೀರಿನ ಕೆರೆ (drinking water lake) ವೀಕ್ಷಣೆ ಮಾಡಿದ ಮಾಜಿ ಸಚಿವರು, ಹಿಂದೆ ನಾನು ಶಾಸಕನಾದ್ದಾಗ ಇದೇ ಸಣ್ಣಕೆರೆಯಲ್ಲಿ ನೀರು ತುಂಬಿಸಿ, ಸಿಂಧನೂರು ನಗರಕ್ಕೆ ಬೆರಸಿಗೆಯಲ್ಲೂ ಐದು ದಿನಗಳಿಗೊಮ್ಮೆ (5 day’s once) ನೀರು ಕೊಡಲಾಗುತ್ತಿತ್ತು. ತುರ್ವಿಹಾಳ ಗ್ರಾಮದಲ್ಲಿ 250 ಎಕರೆಯಲ್ಲಿ ಜಾಗ ಕರೆದಿಸಿದ್ದು, ತಾವೇ ಹಿಂದೆ ಶಾಸಕರಿದ್ದಾಗ 150 ಎಕರೆಯಲ್ಲಿ ಕೆರೆ ಮಾಡಿದ್ದಾರೆ. ಆ ಕೆರೆ ಭರ್ತಿ ಮಾಡದೆ ನಾನಾ ಕಾರಣಗಳು ಹೇಳುತ್ತಿದ್ದಾರೆ. ಇಂದು ಶಾಸಕರ ಬೇಕಾಳಜಿಯಿಂದ, ಅಧಿಕಾರಿಗಳ ನಿರ್ಲಕ್ಷದಿಂದ (Negligence) ಸಿಂಧನೂರು ನಗರದಲ್ಲಿ 15 ದಿನಗಳಿಗೊಮ್ಮೆ ನೀರು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

WhatsApp Group Join Now
Telegram Group Join Now
Share This Article