ಜೂ.4ರಂದು ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಸಕಲ ಸಿದ್ದತೆ : ಡಿ.ಸಿ

K 2 Kannada News
ಜೂ.4ರಂದು ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಸಕಲ ಸಿದ್ದತೆ : ಡಿ.ಸಿ
WhatsApp Group Join Now
Telegram Group Join Now

K2kannadanews.in

Lok Sabha elections ರಾಯಚೂರು : ರಾಯಚೂರು ಲೋಕಸಭಾ ಚುನಾವಣೆ ಸಾರ್ವತ್ರಿಕ ಚುನಾವಣೆ-2024ರ ಮತದಾನ (voting) ಪ್ರಕ್ರಿಯೆ ಪೂರ್ಣಗೊಂಡಿದ್ದು, ಮತ ಎಣಿಕೆ (counting) ಪ್ರಕ್ರಿಯೆಯು ಜೂ.4ರಂದು ನಡೆಯಲಿದ್ದು, ಮತ ಎಣಿಕೆಗೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ತಿಳಿಸಿದರು.

ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ಪ್ರಕ್ರಿಯೆಯು ಮೇ.7ರಂದು (May) ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಈ ಚುನಾವಣೆಯ (Election) ಮತ ಎಣಿಕೆ ಪ್ರಕ್ರಿಯೆಯು ನಗರದ ಎಸ್.ಆರ್.ಪಿ,ಎಸ್ (SRPS) ಹಾಗೂ ಎಲ್.ವಿಡಿ ಕಾಲೇಜಿನಲ್ಲಿ (LVD college) ಜೂ.4ರಂದು ಜರುಗಲಿದೆ ಎಂದರು.
ಮತ ಎಣಿಕೆಗಾಗಿ 159 ಮೇಲ್ವಿಚಾರಕರು, 168 ಮೈಕ್ರೋ ಅಬ್ಸರ್ವರ್ ಹಾಗೂ 159 ಮತ ಎಣಿಕೆ ಸಹಾಕಯರನ್ನು ನೇಮಕ ಮಾಡಲಾಗಿದೆ.

ಅಂದು ಬೆಳಿಗ್ಗೆ 7 ಗಂಟೆಗೆ ಭದ್ರತಾ ಕೊಠಡಿಗಳನ್ನು (Strong room) ತೆರೆಯಲಾಗುವುದು ಬೆಳಿಗ್ಗೆ 8ಗಂಟೆಗೆ ಅಂಚೆ (Postal) ಮತ ಹಾಗೂ ಇವಿಎಂ (EVM) ಮತಗಳ ಎಣಿಕೆ ಪ್ರಾರಂಭವಾಗುತ್ತವೆ ಎಂದು ತಿಳಿಸಿದರು. ಸುರಪುರ, ಶಹಪುರ, ಯಾದಗಿರಿ ಹಾಗೂ ದೇವದುರ್ಗ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಗಳನ್ನು ಎಲ್.ವಿ.ಡಿ ಕಾಲೇಜಿನಲ್ಲಿ ನಡೆಸಲಾಗುವುದು. ರಾಯಚೂರು ಗ್ರಾಮೀಣ, ರಾಯಚೂರು ನಗರ, ಮಾನವಿ ಮತ್ತು ಲಿಂಗಸಗೂರು ವಿಧಾನಸಭಾ ಕ್ಷೇತ್ರದ ಮತಗಳನ್ನು ಎಸ್.ಆರ್.ಪಿ.ಎಸ್ ಕಾಲೇಜಿನಲ್ಲಿ ಎಣಿಕೆ ಮಾಡಲಾಗುವುದು ಎಂದರು.

WhatsApp Group Join Now
Telegram Group Join Now
Share This Article