
K2 ನ್ಯೂಸ್ ಡೆಸ್ಕ್: ದೇಶದಲ್ಲಿ ಮೊದಲ ಬಾರಿಗೆ ಟ್ರಾನ್ಸ್ಜೆಂಡರ್ ಒಬ್ಬರು ಗರ್ಭ ಧರಿಸಿದ್ದು, ಅಚ್ಚರಿ ಮೂಡಿಸಿದ್ದಾರೆ. ಟ್ರಾನ್ಸ್‌ಜೆಂಡರ್ ದಂಪತಿಗಳಾದ ಕೇರಳದ ಆಹದ್ ಫಾಜಿಲ್ ಹಾಗೂ ಜಿಯಾ ಪಾವಲ್ ಪೋಷಕರಾಗುತ್ತಿದ್ದು, ಮಗುವಿಗೆ ಜನ್ಮ ನೀಡಲಿದ್ದಾರೆ.
ಕೋಝಿಕ್ಕೋಡ್‌ನ ಉಮ್ಮಲತ್ತೂರ್‌ನ ಟ್ರಾನ್ಸ್ ಜೆಂಡರ್ ದಂಪತಿ ಸಿಯಾ ಮತ್ತು ಸಹದ್ ಅವರಿಗೆ ಕುತೂಹಲ ಮತ್ತು ಕಾತುರವನ್ನು ತಡೆಯಲಾಗಲಿಲ್ಲ. ಹೆಣ್ಣಾಗಿ ಹುಟ್ಟಿ ಗಂಡಾಗಿ ಬದಲಾದ ಸಹದ್ ಮತ್ತು ಗಂಡಾಗಿ ಹುಟ್ಟಿ ಹೆಣ್ಣಾಗಿ ಬದಲಾದ ಜಿಯಾ ತಮ್ಮ ಸುವರ್ಣಾವಕಾಶಕ್ಕಾಗಿ ಕಾಯುತ್ತಿದ್ದಾರೆ. ಸಹದ್ ಗರ್ಭಧಾರಣೆಯ ಮೂಲಕ ಭಾರತದ ಮೊದಲ ಟ್ರಾನ್ಸ್‌ಮ್ಯಾನ್ ತಂದೆಯಾಗಲು ಸಿದ್ಧರಾಗಿದ್ದಾರೆ.
ಹೆಣ್ಣಾಗಿದ್ದ ಆಹದ್ ಫಾಜಿಲ್ ಶಸ್ತ್ರಚಿಕಿತ್ಸೆ ಮೂಲಕ ಗಂಡಾಗಿ ಬದಲಾಗಿದ್ದಾರೆ. ಹಾಗೆಯೇ ಗಂಡಾಗಿ ಹುಟ್ಟಿದ್ದ ಜಿಯಾ ಪಾವಲ್ ಈಗ ಹೆಣ್ಣಾಗಿ ಬದಲಾಗಿದ್ದಾರೆ. ಮೂಲತಃ ಹೆಣ್ಣಾಗಿದ್ದ ಆಹದ್, ವೈದ್ಯಕೀಯ ಚಿಕೆತ್ಸೆ ಮೂಲಕ ಗರ್ಭ ಧರಿಸಿದ್ದು, ಈಗ ಅವರಿಗೆ 8 ತಿಂಗಳು.
![]() |
![]() |
![]() |
![]() |
![]() |
[ays_poll id=3]