
K2 ನ್ಯೂಸ್ ಡೆಸ್ಕ್ : ಚೀನಾದಲ್ಲಿ ಮತ್ತೆ ಕೊವಿಡ್ ತನ್ನ ರುದ್ರ ನರ್ತನವನ್ನು ಆರಂಭಿಸಿದ್ದು. ಭಯಂಕರವಾಗಿ ಚೀನಾವನ್ನು ಕಾಡುತ್ತಿದೆ. ಇರುವ ಜನಸಂಖ್ಯೆಯಲ್ಲಿ ಭಾಗಶಃ ಜನರಿಗೆ ಸೋಂಕು ತಗುಲಿ ಇಡೀ ಶಾಂಘೈ ಕರೋನಾಮಯವಾಗಿದೆ.
ಶಾಂಫೈನಲ್ಲಿ 70% ಜನರಿಗೆ ಕೋವಿಡ್ ಚೀನಾದ ಶಾಂಫೈನಲ್ಲಿ 2.63 ಕೋಟಿ ಜನಸಂಖ್ಯೆಯಿದ್ದು, ಅವರಲ್ಲಿ 70% ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದು ನಗರದ ಕೋವಿಡ್ ಸಲಹಾ ಸಮಿತಿಯ ಸದಸ್ಯ ಚೆನ್ ಎರ್ಜಾನ್ ಹೇಳಿದ್ದಾರೆ. ಇಲ್ಲಿನ ಪ್ರಮುಖ ಆಸ್ಪತ್ರೆಯಲ್ಲಿ ನಿತ್ಯ 1,300 ತುರ್ತು ದಾಖಲಾತಿಗಳನ್ನು ಮಾಡಲಾಗುತ್ತಿದೆ ಎಂದಿದ್ದಾರೆ. ಏತನ್ಮಧ್ಯೆ, ಚೀನಾದಾದ್ಯಂತ ಡಿಸೆಂಬರ್ ಕೊನೆಯ 20 ದಿನಗಳಲ್ಲಿ ಏಕಕಾಲದಲ್ಲಿ 25 ಕೋಟಿ ಪ್ರಕರಣಗಳು ದಾಖಲಾಗಿವೆ ಎಂದು ಹಲವು ವರದಿಗಳು ಹೇಳುತ್ತಿವೆ. ಆದರೆ, ಪ್ರಕರಣಗಳ ಸಂಖ್ಯೆಯನ್ನು ಸರ್ಕಾರ ಮರೆಮಾಚುತ್ತಿದೆ.
![]() |
![]() |
![]() |
![]() |
![]() |
[ays_poll id=3]