![]() |
![]() |
![]() |
![]() |
![]() |
K2 ನ್ಯೂಸ್ ಡೆಸ್ಕ್ : ಆಸ್ತಿ ವ್ಯಾಜ್ಯದಲ್ಲಿ ಕೊಲೆಗೈದು ಜೈಲು ಶಿಕ್ಷೆಗೆ ಗುರಿಯಾದ ಕೈದಿಯೊಬ್ಬ ಮದುವೆ ಜತೆ ಹನಿಮೂನ್‌ಗಾಗಿ ಹೈಕೋರ್ಟ್‌ನಿಂದ 60ದಿನ ಪೆರೋಲ್ ಪಡೆದುಕೊಂಡ ಅಪರೂಪದ ಘಟನೆ ನಡೆದಿದೆ.
ಆಸ್ತಿ ವ್ಯಾಜ್ಯದಲ್ಲಿ ಕೊಲೆಗೈದು ಶಿಕ್ಷೆಗೆ ಗುರಿಯಾದ ಅಪರಾಧಿಗೆ ಏ.5ರಿಂದ 20ರವರೆಗೆ ಪೆರೋಲ್ ನೀಡಲಾಗಿತ್ತು. ಆತ ಏ.11ರಂದು ರಿಜಿಸ್ಟರ್ ಮದುವೆಯಾಗಿದ್ದು, ದೇವಸ್ಥಾನ ಭೇಟಿ &ಮಧುಚಂದ್ರಕ್ಕೆ 60 ದಿನ ಪೆರೋಲ್‌ಗೆ ವಿಸ್ತರಣೆಗೆ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದ. ಇದನ್ನು ನ್ಯಾ.M ನಾಗಪ್ರಸನ್ನ ಅವರಿದ್ದ ಪೀಠ ಪುರಸ್ಕರಿಸಿ ಹನಿಮೂನ್ ರಜೆ ನೀಡಿದೆ. ಅರ್ಜಿದಾರರ ಪರ ವಕೀಲ ಡಿ.ಮೋಹನ್ ಕುಮಾರ್, ಹೈಕೋರ್ಟ್ ಪೆರೋಲ್ ನೀಡಿದ್ದರಿಂದ ಅರ್ಜಿದಾರ ಪ್ರೇಯಸಿಯನ್ನು ಏ.11ರಂದು ವಿವಾಹವಾಗಿದ್ದಾರೆ. ಆದರೆ, ಹಿಂದೂ ಧರ್ಮದ ಸಂಪ್ರದಾಯ ಮತ್ತು ಆಚರಣೆಯನ್ವಯ ಜೂನ್ ಮೊದಲ ವಾರದಲ್ಲಿ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಲು ಅರ್ಜಿದಾರನ ಪತ್ನಿಯ ಪೋಷಕರು ನಿಶ್ಚಯಿಸಿದ್ದಾರೆ.
ಮದುವೆ ನಂತರ ಮಧುಚಂದ್ರ ಮತ್ತು ದೇವಸ್ಥಾನಗಳಿಗೆ ಭೇಟಿ ಸೇರಿ ಹಿಂದೂ ಸಂಪ್ರದಾಯದ ಇತರೆ ವಿಧಿ ವಿಧಾನ ನೆರವೇರಿಸಬೇಕಾಗುತ್ತದೆ. ಅಲ್ಲದೆ, ಈ ಹಿಂದೆ ಮಂಜೂರು ಮಾಡಿದ ಪೆರೋಲ್ ಅವಧಿ ಏ.20ಕ್ಕೆ ಕೊನೆಗೊಂಡಿದ್ದು, ಮತ್ತೆ 60 ದಿನಗಳ ಕಾಲ ಪೆರೋಲ್ ವಿಸ್ತರಿಸಬೇಕು. ಪೆರೋಲ್ ಅವಧಿ ಮುಗಿದ ನಂತರ ಅರ್ಜಿದಾರ ಕಾರಾಗೃಹದ ಅಧಿಕಾರಿಗಳ ಮುಂದೆ ಹಾಜರಾಗುತ್ತಾರೆ ಎಂದು ಭರವಸೆ ನೀಡಿದರು.
![]() |
![]() |
![]() |
![]() |
![]() |
[ays_poll id=3]