ದಿನಕ್ಕೆ 6 ಚಾಟಿ ಏಟು, 48 ದಿನ ಉಪವಾಸ, ಚಪ್ಪಲಿ ನಿಷೇಧ : ಅಣ್ಣಾಮಲೈ ಶಪಥ..

K 2 Kannada News
ದಿನಕ್ಕೆ 6 ಚಾಟಿ ಏಟು, 48 ದಿನ ಉಪವಾಸ, ಚಪ್ಪಲಿ ನಿಷೇಧ : ಅಣ್ಣಾಮಲೈ ಶಪಥ..
WhatsApp Group Join Now
Telegram Group Join Now

 

K2kannadanews.in

Political News ತಮಿಳುನಾಡು : ಅಣ್ಣಾ ವಿವಿಯ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ, ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷ, ಕೆ ಅಣ್ಣಾಮಲೈ ಅವರು ಶುಕ್ರವಾರ ಚಾಟಿ ತಗೊಂಡು ಮೈಯಿಗೆ ಬಾರಿಸಿಕೊಂಡು ವಿಶೇಷ ಪ್ರತಿಭಟನೆ ನಡೆಸಿದರು.

ಅಣ್ಣಾ ವಿಶ್ವ ವಿದ್ಯಾನಿಲಯದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಣ್ಣಾಮಲೈ ಮತ್ತು ಡಿಎಂಕೆ ಸರ್ಕಾರದ ನಡುವೆ ಸಂಘರ್ಷ ಜೋರಾಗಿದ್ದು. ಈ ಪ್ರಕರಣದಲ್ಲಿ ಸಂತ್ರಸ್ತೆಯ ವೈಯಕ್ತಿಕ ಮಾಹಿತಿಯನ್ನು ಸೋರಿಕೆ ಮಾಡಲಾಗಿದೆ ಎಂದು ಅಣ್ಣಾಮಲೈ ಆರೋಪಿಸಿದ್ದಾರೆ.‌ ಈ ಪ್ರಕರಣಕ್ಕೆ ಸಂಬಂಧಿಸಿ ತಮಿಳುನಾಡಿನಲ್ಲಿ ಮಾತನಾಡಿದ ಅಣ್ಣಾಮಲೈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.

ನಾನು ಡಿಎಂಕೆ ಸರಕಾರ ಕೆಳಗಿಳಿಸುವವರೆಗೂ ಚಪ್ಪಲಿ ಧರಿಸುವುದಿಲ್ಲ. ಶುಕ್ರವಾರ ನನ್ನ ಮನೆ ಮುಂದೆ ನಿಂತು 6 ಬಾರಿ ನನಗೆ ನಾನೇ ಚಾಟಿಯಿಂದ ಬಾರಿಸಿಕೊಳ್ಳುತ್ತೇನೆ ಎಂದಿದ್ದರು, ಅದರಂತೆ ಇಂದು ಬೆಳಿಗ್ಗೆ ತನ್ನ ಮನೆಯ ಮುಂದೆ ಹಸಿರು ಮುಂಡು ಧರಿಸಿ ಆರು ಬಾರಿ ಚಾಟಿಯಿಂದ ಬಾರಿಸಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೆ ಮುಂದಿನ 48 ದಿನಗಳು ಉಪವಾಸ ಕೈಗೊಂಡು, ರಾಜ್ಯದಲ್ಲಿರುವ ಮುರುಗನ್‌ನ 6 ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
Share This Article