ಗುರುವಿನ ಸ್ಥಾನಕ್ಕೆ ಕಳಂಕ ಈ ಶಿಕ್ಷಕ : ಹಾಸ್ಟೆಲ್ ಬಾಲಕಿಯರ 5 ಸಾವಿರ ನಗ್ನ ಫೋಟೋ..!

K 2 Kannada News
ಗುರುವಿನ ಸ್ಥಾನಕ್ಕೆ ಕಳಂಕ ಈ ಶಿಕ್ಷಕ : ಹಾಸ್ಟೆಲ್ ಬಾಲಕಿಯರ 5 ಸಾವಿರ ನಗ್ನ ಫೋಟೋ..!
Oplus_131072
WhatsApp Group Join Now
Telegram Group Join Now

K2kannadanews.in

Amorous teacher ಕೋಲಾರ : ಇಲ್ಲೊಬ್ಬ ಕಾಮುಕ ಚಿತ್ರಕಲಾ ಶಿಕ್ಷಕನೊಬ್ಬ ಹಾಸ್ಟೆಲ್ ನಲ್ಲಿ ಬಾಲಕಿಯರು ಬಟ್ಟೆ ಬದಲಾಯಿಸುತ್ತಿರುವ ಸುಮಾರು 5 ಸಾವಿರಕ್ಕೂ ಹೆಚ್ಚಿನ ವಿಡಿಯೋ ಹಾಗೂ ಫೋಟೋಗಳನ್ನು ತೆಗೆದುಕೊಂಡು ಸಿಕ್ಕಿಬಿದ್ದಿದ್ದು ಆರೋಪಿಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 2023 ರ ಡಿಸೆಂಬರ್ 17 ರಂದು ಹಾಸ್ಟೆಲ್‌ ಕರ್ಮಕಾಂಡ, ರಾಜ್ಯಾದ್ಯಂತ ಸದ್ದು ಮಾಡಿತ್ತು. ಅಲ್ಲದೇ ವಸತಿ ಶಾಲೆ ಮಕ್ಕಳ ಕೈಯಲ್ಲಿ ಶೌಚಗುಂಡಿ ಶುಚಿಗೊಳಿಸಿದ ಆರೋಪ ಕೇಳಿ ಬಂದಿತ್ತು. ಇದೇ ಪ್ರಕರಣದ ಸಂಬಂಧ ಮಾಸ್ತಿ ಪೊಲೀಸರು ತನಿಖೆ ನಡೆಸುವ ವೇಳೆ ಚಿತ್ರಕಲಾ ಶಿಕ್ಷಕ ಮುನಿಯಪ್ಪ (46)ನ 4 ಮೊಬೈಲ್ ಸೀಜ್ ಮಾಡಿ ಪರಿಶೀಲನೆ ನಡೆಸುತ್ತಿರುವಾಗ ಸುಮಾರು 5 ಸಾವಿರಕ್ಕೂ ಹೆಚ್ಚು ನಗ್ನ ವಿಡಿಯೋ‌, ಪೋಟೋ ಪತ್ತೆಯಾಗಿವೆ. ಈ ಪ್ರಕರಣದ ಸಂಬಂಧ ಪೊಲೀಸರು ಕಾಮುಕ ಶಿಕ್ಷಕನನ್ನು ಬಂಧಿಸಿದ್ದು, ಆತನ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಲಾಗಿದೆ.

ಇನ್ನು ಪ್ರಕರಣದ ಸಂಬಂಧ ತನ್ನ ವಿರುದ್ಧ ದಾಖಲಾಗಿರುವ ಎಫ್ ಐಆರ್ ರದ್ದು ಪಡಿಸುವಂತೆ ಕೋರಿ ಶಿಕ್ಷಕ ನ್ಯಾಯಾಲಯದ ಮೊರೆ ಹೋಗಿದ್ದ. ಇದೀಗ ಶಿಕ್ಷಕ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ತಿರಸ್ಕರಿಸಿದ್ದು, ಶಿಕ್ಷಕನ ಈ ಕೃತ್ಯ ನಿಜಕ್ಕೂ ಅಸಭ್ಯ.. ಓರ್ವ ಶಿಕ್ಷಕನಾಗಿ ಇಂತಹ ಕೆಲಸ ಮಾಡಿರುವುದು ಭಯಾನಕವಾಗಿದೆ. ಇಷ್ಟು ಮೊಬೈಲ್‌ಗಳನ್ನು ಓರ್ವ ಚಿತ್ರಕಲಾ ಶಿಕ್ಷಕ ಏಕೆ ಹೊಂದಿದ್ದ? ಆ ವಿಡಿಯೋ ಹಾಗೂ ಚಿತ್ರಗಳು ಯಾವುವು? ಎಂಬುದುಪೂರ್ಣ ಪ್ರಮಾಣದತನಿಖೆ ಮತ್ತು ವಿಚಾರಣೆಯಿಂದ ಬಹಿರಂಗವಾಗಬೇಕಿದೆ ಎಂದು ಪೀಠವು ಆದೇಶಿಸಿದೆ.

ಅದು ಬಿಟ್ಟು ಈ ಹಂತದಲ್ಲಿ ಪ್ರಕರಣ ರದ್ದುಪಡಿಸಿದರೆ ಶಿಕ್ಷಕನ ಅಕ್ರಮ ಚಟುವಟಿಕೆಗಳನ್ನು ಉತ್ತೇಜಿಸಿದಂತಾಗುತ್ತದೆ. ಹೀಗಾಗಿ ಅರ್ಜಿಯನ್ನು ತಿರಸ್ಕರಿಸುವ ಮಾತೇ ಇಲ್ಲ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠವು ಆದೇಶಿಸಿದೆ.

WhatsApp Group Join Now
Telegram Group Join Now
Share This Article