K2kannadanews.in
Fine for police ನ್ಯೂಸ್ ಡೆಸ್ಕ್ : ಮಾಹಿತಿ ಹಕ್ಕು ಅಡಿಯಲ್ಲಿ ಕೇಳಿದ ಮಾಹಿತಿ ನೀಡದ ಹಿನ್ನಲೆ ಮಾಹಿತಿ ಹಕ್ಕು ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಮಾಡಿರುವ ಪೊಲೀಸ್ ಠಾಣೆ ಮತ್ತು ಇಲಾಖೆ ಪಿಎಸ್ಐ ಅಧಿಕಾರಿಳಿಗೆ ಕರ್ನಾಟಕ ಮಾಹಿತಿ ಹಕ್ಕು ಆಯೋಗ ಕಲ್ವಿರ್ಗಿ ಪೀಠ ದಂಡ ವಿಧಿಸಿದ ಘಟನೆ ಜರುಗಿದೆ.
ಹೌದು ಮಾಹಿತಿ ಹಕ್ಕು ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಹಿನ್ನಲೆ ರಾಯಚೂರು ಜಿಲ್ಲೆಯ ಸಿರವಾರ ಠಾಣೆಗೆ 15000, ಇಡಪನೂರು ಪಿಎಸ್ಐ ಅವಿನಾಶ್ ಕಾಂಬ್ಳೆ ಇವರಿಗೆ 10000 ಹಾಗೂ ಬಳ್ಳಾರಿ ಜಿಲ್ಲೆಯ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಗೀತಾಂಜಲಿ ಶಿಂದೆ ಇವರಿಗೆ 25000 ಸೇರಿ ಒಟ್ಟಾರೆ 50000 ದಂಡ ವಿಧಿಸಿ ಕರ್ನಾಟಕ ಮಾಹಿತಿ ಆಯೋಗ ಕಲಬುರಗಿ ಪೀಠ ಆದೇಶ ಹೊರಡಿಸಿ.
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಜಾಲಪುರ್ ಕ್ಯಾಂಪಿನ ಸಿವಿಲ್ ಇಂಜಿನಿಯರ್ ಮತ್ತು ಸಾಮಾಜಿಕ ಕಾರ್ಯಕರ್ತ ಪವನ್ ಕುಮಾರ್ ಕೊರಿಪಲ್ಲಿ ಮಾಹಿತಿ ಹಕ್ಕು ಅಡಿಯಲ್ಲಿ ಸಿರವಾರ ಪೊಲೀಸ್ ಠಾಣೆಯ ದಿನಾಂಕ 01/06/2022 ರ ರಾತ್ರಿ 7:50 ರಿಂದ 11:50 ರ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುಂತೆ ಅರ್ಜಿ ಸಲ್ಲಿಸಿದ್ದರು. 48 ತಾಸುಗಳಲ್ಲಿ ಒದಗಿಸಬೇಕಾಗಿತ್ತು. ಆದ್ರೆ ಸುಮಾರು 2.5 ವರ್ಷ ಕಳೆದರೂ ಅಧಿಕಾರಿಗಳು ಮಾಹಿತಿ ಒದಗಿಸಿರುವುದಿಲ್ಲ ಮತ್ತು ಪದೇ ಪದೇ ಮಾಹಿತಿ ಆಯೋಗದ ಆಯುಕ್ತರಿಗೆ ತಪ್ಪು ಮಾಹಿತಿ ಮತ್ತು ಅಸ್ಪಷ್ಟ ಮಾಹಿತಿ ಒದಗಿಸಿ ಪ್ರಕರಣವನ್ನು ದಿಕ್ಕು ತಪ್ಪುವಂತೆ ಮಾಡಿರುತ್ತಾರೆ ಎಂದು ಆಯುಕ್ತರು ತಮ್ಮ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಬಳ್ಳಾರಿ ಜಿಲ್ಲೆಯ ಬಳ್ಳಾರಿ ಗ್ರಾಮಾಂತರ ಠಾಣೆಯ ಪಿಎಸ್ಐ ಗೀತಾಂಜಲಿ ಶಿಂದೆ ಇವರ 25000ಗಳ ದಂಡ ವಿಧಿಸಿದ ದಂಡವನ್ನು ಇವರ ಸಂಬಳದಿಂದ ಕಟ್ ಮಾಡುವಂತೆ ಬಳ್ಳಾರಿ ಎಸ್ಪಿ ಶೋಭಾರಾಣಿ ವಿ ಅವರಿಗೆ ಸೂಚಿಸಿದೆ. ಇನ್ನು ರಾಯಚೂರು ತಾಲೂಕಿನ ಇಡಪನೂರ್ ಪೊಲೀಸ್ ಠಾಣೆಯ ಪಿಎಸ್ಐ ಅವಿನಾಶ್ ಕಾಂಬಳೆಗೆ 10000 ದಂಡ ಸಂಬಳದಿಂದ ಕಟ್ ಮಾಡಿ ಪಾವತಿಸಲು ರಾಯಚೂರು ಎಸ್ಪಿ ಎಸ್.ಪುಟ್ಟಮಾದಯ್ಯ ಅವರಿಗೆ ಸೂಚಿಸಿದೆ. ಸಿರವಾರ ಠಾಣೆಯ ಪಿಎಸ್ಐ ಗುರುಚಂದ್ರ ಯಾದವ್ ಅವರು 15000 ದಂಡ ಕಚೇರಿಯ ನಿಧಿಯಿಂದ ಪವನ್ ಕುಮಾರ್ ಕೊರಿಪಲ್ಲಿಗೆ ನೀಡಲು ಸೂಚಿಸಿದ್ದಾರೆ.