K2kannadanews.in
Railway’s ನ್ಯೂಸ್ ಡೆಸ್ಕ್ : ಇತ್ತೀಚೆಗೆ ಭಾರತೀಯ ರೈಲ್ವೆ ಇಲಾಖೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಒಂದು ಕಾರ್ಯದಿಂದ ಇಲಾಖೆ ಗಳಿಸಿದ್ದು 452 ಕೋಟಿ ಅಂದ್ರೆ ನಂಬ್ತಿರಾ. ಹೌದು ನಂಬಲೇ ಬೇಕು ಅದು ಹೇಗೆ ಅಂನ್ನೋದು ಮುಂದೆ ಓದಿ.
ಭಾರತೀಯ ರೈಲ್ವೆ ಇಲಾಖೆಯು ಈ ಅಭಿಯಾನದಡಿ 56,168 ಸ್ವಚ್ಛತಾ ಕಾರ್ಯಕ್ರಮಗಳನ್ನು ಆಯೋಜನೆ ನಡೆಸಿತ್ತು. ಕೆಲಸ ಮಾಡುವ ಸ್ಥಳ, ರೈಲ್ವೆ ನಿಲ್ದಾಣದ ಸ್ವಚ್ಚತೆಯನ್ನು ಒಳಗೊಂಡಿತ್ತು. ನವದೆಹಲಿ, ಜೈಪುರ, ಚೆನ್ನೈ, ನಾಗ್ಪುರ, ಕೋಟಾ, ಜೋಧ್ಪುರ, ಲಕ್ನೋ, ಪುಣೆ, ಭೋಪಾಲ್, ಕೋಲ್ಕತ್ತಾ ಮತ್ತು ಇತರ ಪ್ರಮುಖ ರೈಲು ನಿಲ್ದಾಣಗಳಲ್ಲಿ ವಿಶೇಷ ರೈಲು ಸ್ವಚ್ಛತಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಈ ಒಂದು ಕಾರ್ಯಕ್ರಮದ ಸಮಯದಲ್ಲಿ 12.15 ಲಕ್ಷ ಚದರ ಅಡಿ ಜಾಗವನ್ನು ಸ್ವಚ್ಛಗೊಳಿಸಲಾಗಿತ್ತು. ಈ ಸ್ವಚ್ಛತೆಯಿಂದ ತೆರವಾದ ಗುಜರಿ ಮಾರಾಟದಿಂದ ಭಾರತೀಯ ರೈಲ್ವೆಯ ಬೊಕ್ಕಸಕ್ಕೆ 452.40 ಕೋಟಿ ರೂ. ಆದಾಯ ಬಂದಿದೆ. 2.5 ಲಕ್ಷ ಸಾರ್ವಜನಿಕ ಕುಂದುಕೊರತೆಗಳು ಮತ್ತು 1,427 ಸಾರ್ವಜನಿಕ ಕುಂದುಕೊರತೆ ಮನವಿಗಳನ್ನು ಪರಿಹರಿಸಲಾಗಿದೆ.