K2kannadanews.in
Heart attack ಗುಜರಾತ್ : ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಗೆ ಹೃದಯಾಘಾತದ ಅಪಾಯ ಹೆಚ್ಚುತ್ತಿದೆ. ಚಿಕ್ಕ ಮಕ್ಕಳು ಹಠಾತ್ತನೆ ಸಾವನ್ನಪ್ಪಿದ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಅಂತಹದ್ದೆ ಒಂದು ಗುಜರಾತ್ನ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಅಹಮದಾಬಾದ್ನ ಖಾಸಗಿ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದ 8 ವರ್ಷದ ಬಾಲಕಿ ಕಾರ್ಡಿಯಾಕ್ ಅರೆಸ್ಟ್ನಿಂದ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ವಿದ್ಯಾರ್ಥಿನಿ ಗಾರ್ಗಿ ರನ್ಪರಾ ಶಾಲೆಯ ಲಾಬಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆಕೆಯ ಎದೆಯಲ್ಲಿ ನೋವು ಕಾಣಿಸಿಕೊಂಡಿದೆ. ನೋವಿನಲ್ಲಿಯೇ ಆಕೆ ಬೆಂಚ್ ಮೇಲೆ ಕುಳಿತುಕೊಂಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಗ ಬೆಂಚ್ ಮೇಲೆ ಕುಳಿತುಕೊಳ್ಳುವ ಮುನ್ನ ಆಕೆ ತನ್ನ ಎದೆಯ ಮೇಲೆ ಕೈ ಇಟ್ಟುಕೊಳ್ಳುತ್ತಲೇ ಕೂರುವುದನ್ನು ಕಾಣಬಹುದು.
ನಂತರ ಏಕಾಏಕಿ ಕುಳಿತಲ್ಲಿಯೇ ಕುಸಿದು ಬೀಳುತ್ತಾಳೆ. ಆಗ ಅಲ್ಲಿಯೇ ಇದ್ದ ಸಿಬ್ಬಂದಿಗಳು ನೋಡಿ, ಕೂಡಲೇ ಬಾಲಕಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಣ್ಟೊತ್ತಿಗಾಗಲೇ ಬಾಲಕಿ ಮೃತ ಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಬಾಲಕಿಗೆ ಹೃದಯಾಘಾತವಾಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.