K2kannadanews.in
Cat Virus ರಾಯಚೂರು : ಕಳೆದ ಕೆಲ ದಿನಗಳ ಹಿಂದೆ ಜಿಲ್ಲೆಯಲ್ಲಿ ಪಕ್ಷಿಗಳ ಮಾರಣಹೋಮ ನಡೆದಿದ್ದರೆ, ಈಗ ಫೆಲಿನಾ ಪ್ಯಾನಲಿಕೊಪೆನಿಯಾ ವೈರಸ್‌ಗೆ ವೈರಸ್ ದಾಳಿಯಿಂದ ಸುಮಾರು 38 ಬೆಕ್ಕುಗಳು ಬಲಿಯಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಬೆಕ್ಕುಗಳಲ್ಲಿ ವಾಂತಿ ಭೇದಿ ಕಾಣಿಸಿಕೊಳ್ಳುತ್ತಿದ್ದು, ಚಿಕಿತ್ಸೆ ನೀಡಿದರೂ ಚೇತರಿಸಿಕೊಳ್ಳದೆ ಸಾವನ್ನಪ್ಪುತ್ತಿವೆ.
ರಾಜ್ಯದಲ್ಲಿ ಹೆಚ್ಚಾದ ಹಕ್ಕಿ ಜ್ವರದಿಂದಾಗಿ ಜನ ಒಂದಷ್ಟು ಭಯದಲ್ಲಿದ್ದಾರೆ. ಈ ಮಧ್ಯ ಮತ್ತೊಂದು ಮಾರಣಾಂತಿಕ ರೋಗ ಜನರಲ್ಲಿ ಭೀತಿಯನ್ನು ಹುಟ್ಟಿಸಿದೆ. ಎಫ್‌ಪಿವಿ (Feline Panleukopenia Virus) ಎನ್ನುವ ವೈರಸ್ ರಾಯಚೂರಿನಲ್ಲಿ ಕಳೆದ ಒಂದು ತಿಂಗಳಿನಲ್ಲಿ ನೂರಕ್ಕೂ ಹೆಚ್ಚು ಬೆಕ್ಕುಗಳನ್ನು ಬಲಿ ತೆಗೆದುಕೊಂಡಿದೆ. ಅಲ್ಲದೆ 150ಕ್ಕೂ ಹೆಚ್ಚು ಬೆಕ್ಕುಗಳಲ್ಲಿ ವೈರಸ್ ಕಾಣಿಸಿಕೊಂಡಿದೆ.
ಈ ಸೋಂಕು ತಗುಲಿದ ಬೆಕ್ಕು ಬದುಕುಳಿಯುವುದು ತೀರಾ ಕಡಿಮೆ. ಸೋಂಕು ತಗುಲಿದ ಕೆಲವೇ ದಿನದಲ್ಲಿ ಬೆಕ್ಕುಗಳು ಸಾವನ್ನಪ್ಪುತ್ತಿವೆ. ಅಲ್ಲದೆ ಈ ಸೋಂಕು ಒಂದು ಬೆಕ್ಕಿನಿಂದ ಮತ್ತೊಂದು ಬೆಕ್ಕಿಗೆ ವೇಗವಾಗಿ ಹರಡುತ್ತಿದ್ದು ಸಾರ್ವಜನಿಕರಿಗೆ ಈ ಸೋಂಕು ತಗುಲುವ ಆತಂಕ ಶುರುವಾಗಿದೆ. ಸೋಂಕಿಗೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ರೋಗ ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನಿಡಲಾಗುತ್ತದೆ. ಹಾಗಾದರೆ ಏನಿದು ಎಫ್‌ಪಿವಿ? ಇದರ ಲಕ್ಷಣಗಳೇನು? ಇದನ್ನು ಗುರುತಿಸುವುದು ಹೇಗೆ? ಇದು ಮನುಷ್ಯರಿಗೂ ಹರಡುತ್ತಾ ಎಂಬ ಅನುಮಾನ ಇತ್ತು.? ಇದರಿಂದ ಮನುಷ್ಯರಿಗಾಗಲಿ ಅಥವಾ ನಾಯಿಗಳಿಗಾಗಲಿ ತೊಂದರೆ ಇಲ್ಲ ಇಂದು ಪಶು ಇಲಾಖೆ ವೈದ್ಯರು ಮಾಹಿತಿ ನೀಡಿದ್ದಾರೆ.