
ರಾಯಚೂರು : ಜನ ಮಾನಸ ನಗರದಲ್ಲಿ ಗೀತಾ ಎನ್ನುವವರ ಮನೆಯಲ್ಲಿ ಕಳ್ಳತನ ನಡೆದಿದೆ. ಗೀತಾ ಅವರ ಪತಿ ರಾಘವೇಂದ್ರ ದುಬೈನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರ ಮನೆಯಲ್ಲಿದ್ದ ಸುಮಾರು 345 ಗ್ರಾಂ ಚಿನ್ನಾಭರಣವನ್ನ ದೋಚಲಾಗಿದೆ. ರಾಯಚೂರು ನಗರ ಆಂಧ್ರ, ತೆಲಂಗಾಣ ಗಡಿಯಲ್ಲಿರುವ ಹಿನ್ನೆಲೆ ಇಂಥ ಕೃತ್ಯಗಳನ್ನ ಆ ಭಾಗದ ಕಳ್ಳರೇ ಮಾಡಿರುವ ಅನುಮಾನವಿದೆ.
ಗೀತಾ ಮನೆಯಲ್ಲಿ ವಿವಿಧ ಬಗೆಯ ಸಾಕಷ್ಟು ಚಿನ್ನಾಭರಣ, ಬೆಳ್ಳಿ ಇತ್ತು. ಎಲ್ಲವನ್ನೂ ಇವರು ಬ್ಯಾಂಕ್ ಲಾಕರ್ ನಲ್ಲಿರಿಸಿದ್ರು. ಗೀತಾ ಕುಟುಂಬಸ್ಥರೊಬ್ಬರ ಎಂಗೆಜ್ಮೆಂಟ್ ಇದೆ. ಹೀಗಾಗಿ ಬ್ಯಾಂಕ್ ಲಾಕರ್ನಲ್ಲಿದ್ದ 30 ತೊಲೆ ಬಂಗಾರದ ಆಭರಣ ಅಂದ್ರೆ 300 ಗ್ರಾಂ ಚಿನ್ನಾಭರಣ ಮನೆಗೆ ತಂದಿದ್ರು. ಗೀತಾ ತಮ್ಮ ಮಗಳು ನಿಖಿತಾ ಜೊತೆ ಮಾರ್ಕೆಟ್ಗೆ ಹೋಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಗೀತಾ ಅವರು ಮನೆ ಸುತ್ತಲೂ ಕಬ್ಬಿಣದ ಗ್ರಿಲ್ ಹಾಕಿಸಿದ್ದಾರೆ. ಆದರೆ ಐನಾತಿ ಕಳ್ಳರು ಅದೇ ಗ್ರಿಲ್ಗಳನ್ನು ಹಿಡಿದುಕೊಂಡು ಮನೆ ಏರಿ ನಂತರ ಬಾಗಿಲು ಮುರಿದು ಒಳನುಗ್ಗಿದ್ದಾರೆ.
ಮನೆಯೊಳಗಿದ್ದ ಲಾಕರ್ ಮುರಿದು ವಿವಿಧ ಬಗೆಯ 345 ಗ್ರಾಂ ಚಿನ್ನಾಭರಣ ಕದ್ದೊಯ್ದಿದ್ದಾರೆ. ಇಲ್ಲಿ ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ, ಇದೇ ಮನೆಯ ಮತ್ತೊಂದು ಲಾಕರ್ನಲ್ಲಿ ಬೆಳ್ಳಿ ಆಭರಣಗಳಿದ್ದವು. ಆ ಲಾಕರ್ ಓಪನ್ ಕೂಡ ಮಾಡಿದ್ದು, ಆದ್ರೆ ಬೆಳ್ಳಿ ಆಭರಣವನ್ನ ಮುಟ್ಟಿಲ್ಲ, ಕೇವಲ ಚಿನ್ನಾಭರಣ ಮಾತ್ರ ದೋಚಿದ್ದಾರೆ. ಕಷ್ಟ ಪಟ್ಟು ಸಂಪಾದಿಸಿದ್ದ ನಗ, ನಾಣ್ಯ ಹೋಯಿತಲ್ಲ ಎಂದು ಮಹಿಳೆ ಕಣ್ಣೀರಿಡುತ್ತಿದ್ದಾರೆ. ಘಟನೆ ಬಳಿಕ ನೇತಾಜಿ ನಗರ ಪೊಲೀಸರು ಶ್ವಾನದಳದ ಮೂಲಕ ಘಟನಾ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಕಳ್ಳರ ಫಿಂಗರ್ ಪ್ರಿಂಟ್ಗಳು ಪತ್ತೆಯಾಗಿದ್ದು, ಆ ಬಗ್ಗೆಯೂ ಸಾಕ್ಷ ಕಲೆ ಹಾಕಲಾಗಿದೆ. ಈ ಬಗ್ಗೆ ನೇತಾಜಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
![]() |
![]() |
![]() |
![]() |
![]() |
[ays_poll id=3]