K2kannadanews.in
3 cars damaged ರಾಯಚೂರು : ಡಿಡಿಪಿಐ (DDPI) ಕಚೇರಿ ಆವರಣದಲ್ಲಿ (premises) ಹಳೆಯ ಆಲದ ಮರದ (Tree) ಕೊಂಬೆಯೊಂದು ಮುರಿದ ಬಿದ್ದ ಹಿನ್ನೆಲೆಯಲ್ಲಿ ಮೂರು ಕಾರುಗಳು (3 cars) ಜಖಂಗೊಂಡ ಘಟನೆ ನಡೆದಿದೆ.
https://youtu.be/9joXWyZFHQQ?si=5adg3eAZ5-qTizlz
ರಾಯಚೂರು (Raichur) ನಗರದ ತಹಸೀಲ್ದಾರ್ (Thasil office) ಕಚೇರಿ ಪಕ್ಕದಲ್ಲಿ ಇರುವ ಡಿಡಿಪಿಐ ಕಚೇರಿ ಆವರಣದಲ್ಲಿ ಹಳೆಯ ಆಲದ ಮರದ ಕೊಂಬೆಯೊಂದು ಮುರಿದು ಬಿದ್ದಿದೆ. ಇನ್ನು ಇದೇ ಮರದ ಕೆಳಗೆ ನಿಲ್ಲಿಸಿದ್ದ ಮೂರು ಕಾರುಗಳು ಜಖಂ ಆಗಿವೆ. ಅದರಲ್ಲಿ ಹೊಸದಾಗಿ (New) ತಂದು ಅದೇ ತಾನೇ ನಿಲ್ಲಿಸಿದ್ದ ಇನ್ನೋವಾ ಕ್ರೆಸ್ಟ (Innovative crests) ಕಾರು, ಟಾಟಾ ಇಂಡಿಕಾ (TATA indica) ಮತ್ತು ಫೋರ್ಡ್ (Ford) 3 ಕಾರುಗಳು ಜಖಂ ಆಗಿವೆ. ಘಟನೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗಿಲ್ಲ. ಕಾರಿನ ಮಾಲೀಕರು ನಿಲ್ಲಿಸಿ ಬೇರೆಡೆ ಹೋಗಿದ್ದರಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ಮರ ಬೀಳುತ್ತಿದ್ದಂತೆ ಗಾಬರಿಯಿಂದ ಬಂದ ಜನರು, ಹೇಗೆ ನಡೆಯಿತು ಎಂದು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.