2025ರ ಮಾರ್ಚ್‌ ಒಳಗೆ ಜಿ.ಪಂ, ತಾ.ಪಂ ಇತರೆ ಸ್ಥಳಿಯ ಚುನಾವಣೆ ನಡೆಸದಿದ್ದರೆ 2,100 ಕೋಟಿ ಸಿಗಲ್ಲ..

K 2 Kannada News
2025ರ ಮಾರ್ಚ್‌ ಒಳಗೆ ಜಿ.ಪಂ, ತಾ.ಪಂ ಇತರೆ ಸ್ಥಳಿಯ ಚುನಾವಣೆ ನಡೆಸದಿದ್ದರೆ 2,100 ಕೋಟಿ ಸಿಗಲ್ಲ..
Oplus_131072
WhatsApp Group Join Now
Telegram Group Join Now

K2kannadanews.in

ZP, TP Election ರಾಜಕೀಯ : ಕಾಲ ಮಿತಿಯೊಳಗೆ ಅಂದರೇ 2025ರ ಮಾರ್ಚ್‌(March) ಅಂತ್ಯಕ್ಕೆ ಚುನಾವಣೆಗಳು (Election) ನಡೆಯದಿದ್ದರೇ, ಸರಕಾರದ (government) 15ನೇ ಹಣಕಾಸು (15 finance) ಆಯೋಗದಡಿ ರಾಜ್ಯಕ್ಕೆ (State) ಬರಬೇಕಾದ 2,100 ಕೋಟಿ ರೂ. ಅನುದಾನ (fand) ನಮಗೆ ಸಿಗುವುದಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ರಾಜ್ಯ ಸರಕಾರಕ್ಕೆ ರಾಜ್ಯ ಚುನಾವಣ ಆಯೋಗ (Electronic commission) ಕಳವಳ ವ್ಯಕ್ತಪಡಿಸಿದೆ.

ಹೌದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (BBMP) ಸಹಿತ ರಾಜ್ಯದ ಜಿಲ್ಲಾ ಪಂಚಾಯತ (ZP), ತಾಲ್ಲೂಕು ಪಂಚಾಯತ (TP), ಹಾಗೂ ಇತರ ನಗರ ಸ್ಥಳೀಯ ಸಂಸ್ಥೆಗಳಿಗೆ 2025ರ ಮಾರ್ಚ್‌ ಅಂತ್ಯದ ವರೆಗೆ ಚುನಾವಣೆಗಳು ನಡೆಯದಿದ್ದರೆ ಕೇಂದ್ರ ಸರಕಾರದಿಂದ 15ನೇ ಹಣಕಾಸು ಆಯೋಗದಡಿ ರಾಜ್ಯಕ್ಕೆ ಬರಬೇಕಾದ 2,100 ಕೋಟಿ ರೂ.ಅನುದಾನ ಖೋತಾ ಆಗಲಿದೆ ಎಂದು ರಾಜ್ಯ ಚುನಾವಣ ಆಯೋಗ ಕಳವಳ ವ್ಯಕ್ತಪಡಿಸಿದೆ. ಈ ಮೂಲಕ ಈ ಚುನಾವಣೆಗಳನ್ನು ಶೀಘ್ರದಲ್ಲೇ ನಡೆಸಿ ಎಂದು ಸರಕಾರಕ್ಕೆ ಪರೋಕ್ಷ ಸೂಚನೆ ನೀಡಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಚುನಾವಣ ಆಯುಕ್ತ ಜಿ.ಎಸ್‌. ಸಂಗ್ರೇಶಿ ಈ ವಿಷಯ ತಿಳಿಸಿದರು. ಬಿಬಿಎಂಪಿ ಹಾಗೂ ಜಿ.ಪಂ., ತಾ.ಪಂ.ಗಳಿಗೆ 4 ವರ್ಷಗಳಿಂದ ಚುನಾವಣೆ ನಡೆದಿಲ್ಲ. 15ನೇ ಹಣಕಾಸು ಆಯೋಗ ದಲ್ಲಿ 2020-21ನೇ ಸಾಲಿನಿಂದೀಚೆ ಕೇಂದ್ರ ಸರಕಾರದಿಂದ ರಾಜ್ಯಕ್ಕೆ 2,100 ಕೋ.ರೂ. ಅನುದಾನ ಬರಬೇಕಿತ್ತು. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು, ಅಲ್ಲಿ ಚುನಾಯಿತ ಆಡಳಿತ ವ್ಯವಸ್ಥೆ ಇದ್ದರೆ ಮಾತ್ರ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹಣಕಾಸು ಆಯೋಗದ ಷರತ್ತು ಇದೆ. ಈ ಬಗ್ಗೆ ಶೀಘ್ರದಲ್ಲೇ ಪತ್ರ ಬರೆಯಲಾಗುವುದು ಎಂದು ಆಯುಕ್ತರು  ತಿಳಿಸಿದರು.

WhatsApp Group Join Now
Telegram Group Join Now
Share This Article