
K2 ನ್ಯೂಸ್ ಡೆಸ್ಕ್ : ಆಗತಾನೇ ಜನಿಸಿದ ಮಗುವಿನ ಉದ್ದ 2 ಅಡಿ ಹಾಗೂ ತೂಕ 7.3 ಕೆ.ಜಿ. ಇದೆ ಅಂದ್ರೆ ನಂಬ್ತೀರಾ ನಂಬಲೇಬೇಕು. ಬ್ರೆಜಿಲ್ನ ಮಹಿಳೆಯೊಬ್ಬರು ಇತ್ತೀಚೆಗೆ ಜನ್ಮ ನೀಡಿರುವ ಮಗುವಿನ ಗಾತ್ರ ಹಾಗೂ ತೂಕ ಎಲ್ಲರನ್ನು ಅಚ್ಚರಿಗೊಳಿಸುವಂತೆ ಮಾಡಿದೆ.
ಪಾರಿಂಟಿನ್ಸ್ ನ ಪಾಡ್ರೆ ಕೊಲಂಬೊ ಆಸ್ಪತ್ರೆಯಲ್ಲಿ ಜನಿಸಿರುವ ಮಗುವಿಗೆ ಆಂಗರ್ಸನ್ ಸ್ಯಾಂಟೋಸ್ ಎಂದು ನಾಮಕರಣ ಮಾಡಲಾಗಿದೆ. ಈ ಹಿಂದೆಯೂ ಅಸಹಜ ಗಾತ್ರ ಹಾಗೂ ತೂಕದ ಮಕ್ಕಳು ಜನಿಸಿದ ಉದಾಹರಣೆಗಳಿವೆ. 2016ರಲ್ಲಿ ಜನಿಸಿದ 6.8 ಕೆ.ಜಿ. ತೂಕದ ಶಿಶು ಬ್ರೆಜಿಲ್ನಲ್ಲಿ ಇದುವರೆಗೆ ಜನಿಸಿದ ಅತಿ ಹೆಚ್ಚು ತೂಕದ ಮಗು ಎಂಬ ದಾಖಲೆ ಹೊಂದಿದ್ದು ಇದೀಗ ಆಂಗರ್ಸನ್ ಸ್ಯಾಂಟೋಸ್ ಅದನ್ನು ಮುರಿದಿದೆ. ಆದರೆ, ವಿಶ್ವದಲ್ಲಿ ಇದಕ್ಕಿಂತ ಹೆಚ್ಚು ತೂಕದ ಮಗು ಜನಿಸಿರುವ ಉದಾಹರಣೆ ಇದೆ. 1955ರಲ್ಲಿ ಇಟಲಿಯಲ್ಲಿ 10.2 ಕೆ.ಜಿ. ತೂಕದ ಮಗು ಜನಿಸಿತ್ತು. ಜನನದ ಸಮಯದಲ್ಲಿ ಸಾಮಾನ್ಯವಾಗಿ ಗಂಡು ಮಗುವಿನ ತೂಕ 3.3 ಕೆಜಿ ಹಾಗೂ ಹೆಣ್ಣು ಮಗುವಿನ ತೂಕ 3.2 ಕೆಜಿ ವರೆಗೆ ಇರುತ್ತದೆ.
![]() |
![]() |
![]() |
![]() |
![]() |
[ays_poll id=3]