K2kannadanews.in
Mantralaya ರಾಯಚೂರು : ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸೆಪ್ಟೆಂಬರ್ ತಿಂಗಳ ಹುಂಡಿ ಎಣಿಕೆ ಮಾಡಲಾಗಿದ್ದು, 2 ಕೋಟಿ 94 ಲಕ್ಷ ಕಾಣಿಕೆ ಸಂಗ್ರಹವಾಗಿದೆ ಎಂದು ಶ್ರೀಮಠದ ವ್ಯವಸ್ಥಾಪಕರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಕಲಿಯುಗ ಕಾಮಧೇನು ಬೇಡಿದವರ ನೀಡುವ ಕಲ್ಪವೃಕ್ಷ, ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭಕ್ತರ ಸಂಖ್ಯೆ ಕಡಿಮೆ ಇಲ್ಲ. ಭಕ್ತರು ರಾಯರಿಗೆ ಸಲ್ಲಿಸುವ ಕಾಣಿಕೆಯನ್ನು ಶ್ರೀ ಮಠದಲ್ಲಿ ಪ್ರತಿ ತಿಂಗಳು ಉಂಡಿ ಎಣಿಕೆ ಕಾರ್ಯ ಮಾಡಲಾಗುತ್ತದೆ. ಅಂತೆಯೇ ಸೆಪ್ಟಂಬರ್ ತಿಂಗಳ 28 ದಿನಗಳ ಕಾಲ ಸಂಗ್ರಹವಾದ ಹುಂಡಿ ಎಣಿಕೆ ಕಾರ್ಯ ಶ್ರೀಮಠದಲ್ಲಿ ಮಾಡಲಾಗಿದೆ.
28 ದಿನದಲ್ಲಿ 2,94,57,810 ಕಾಣಿಕೆ ಸಂಗ್ರಹವಾಗಿದ್ದು, 70.500 ಗ್ರಾಂ ಬಂಗಾರ ಮತ್ತು 1240 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ. ಈ ಒಂದು ಎಣಿಕೆ ಕಾರ್ಯದಲ್ಲಿ ವಿವಿಧ ಭಜನಾ ಭಕ್ತ ಮಂಡಳಿ ಮಹಿಳೆಯರು ಮತ್ತು ಹಲವು ಜನ ಭಕ್ತರು ಭಾಗವಹಿಸಿದ್ದು ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು.