187 ಕೋಟಿ ಹಗರಣ : ಯಾರೇ ತಪ್ಪಿತಸ್ಥರು ಇದ್ರೂ ರಕ್ಷಣೆಯ ಪ್ರಶ್ನೆಯೇ ಇಲ್ಲ : ದದ್ಧಲ್

K 2 Kannada News
187 ಕೋಟಿ ಹಗರಣ : ಯಾರೇ ತಪ್ಪಿತಸ್ಥರು ಇದ್ರೂ ರಕ್ಷಣೆಯ ಪ್ರಶ್ನೆಯೇ ಇಲ್ಲ : ದದ್ಧಲ್
WhatsApp Group Join Now
Telegram Group Join Now

K2kannadanews.in

187 Crore scam ರಾಯಚೂರು : ವಾಲ್ಮೀಕಿ (valmiki) ನಿಗಮದ 187 ಕೋಟಿ ಹಗರಣ ವಿಚಾರಕ್ಕೆ ಸಂಬಂದಿಸಿದಂತೆ ಯಾರೇ ತಪ್ಪಿತಸ್ಥರು ಇದ್ರೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು‌ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಹೇಳಿದರು.

ರಾಯಚೂರು (Raichur) ನಗದಲ್ಲಿ ಮತನಾಡಿದ ಅವರು ಎಸ್ ಐಟಿ (SIT), ಸಿಬಿಐ CBI) ಮತ್ತು ಇಡಿ (ED) ಮೂರು ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಮೂರು ಸಂಸ್ಥೆಗಳು ದಾಖಲೆಗಳು ಸಂಗ್ರಹ ಮಾಡುತ್ತಿದ್ದು, ತೀವ್ರಗತಿಯಲ್ಲಿ ತನಿಖೆ ನಡೆಯುತ್ತಿದೆ. ಯಾರೇ ತಪ್ಪಿತಸ್ಥರು ಇದ್ರೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದರು. ಜೂನ್ 26ರಂದು ವಾಲ್ಮೀಕಿ ನಿಗಮ ಪ್ರಿನ್ಸಿಪಲ್ ಸೆಕ್ರೆಟರಿ ಮಂಜುನಾಥ ಪ್ರಸಾದ್ ನೇತೃತ್ವದಲ್ಲಿ ಸಭೆ ಆಗಿದೆ. ಎಲ್ಲಾ ಅಧಿಕಾರಿಗಳ ಜೊತೆಗೆ ಸಿಎಂ ಸಿದ್ದರಾಮಯ್ಯ ಕೂಡ ಸಭೆ ಮಾಡಿದ್ದಾರೆ.

ಯಾರು ತಪ್ಪು ಮಾಡಿದ್ದಾರೆ ಅವರು ಅನುಭವಿಸಲೇಬೇಕು, ಸಚಿವ ನಾಗೇಂದ್ರ ರಕ್ಷಣೆ ವಿಚಾರ ಇದರಲ್ಲಿ ಯಾರನ್ನ ಯಾರು ರಕ್ಷಣೆ ಮಾಡುವ ಪ್ರಶ್ನೆ ಇಲ್ಲ, ಒಂದು ಸಂಸ್ಥೆ ತನಿಖೆ ‌ಮಾಡುತ್ತಿಲ್ಲ, ಮೂರು ಉನ್ನತ ಸಂಸ್ಥೆಗಳ ದಕ್ಷ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ನಮ್ಮ ಸಮಾಜಕ್ಕಾಗಿ ಬಂದ ಹಣ ಅದು, ನಾನು ಕೂಡ ಎಸ್ ಟಿ ಮೀಸಲು ಕ್ಷೇತ್ರದಿಂದ ಆಯ್ಕೆ ಆಗಿದ್ದೇನೆ. ಹಗರಣದ ಬಗ್ಗೆ ಸಮಗ್ರ ತನಿಖೆ ಆಗುತ್ತೆ ಎಂಬ ಭರವಸೆ ಇದೆ. ಯಾರು ತಪ್ಪು ಮಾಡಿದ್ದಾರೆ, ಯಾರು ದುಡ್ಡು ಲೂಟಿ ಮಾಡಿದ್ದಾರೆ. ಅವರಿಂದ ದುಡ್ಡು ಮರಳಿ ನಿಗಮಕ್ಕೆ ತರಿಸುವ ಕೆಲಸ ನಡೆದಿದೆ ಎಂದರು.

WhatsApp Group Join Now
Telegram Group Join Now
Share This Article